Wednesday, 22 January 2020

ಒಣದ್ರಾಕ್ಷಿ!! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!





ಒಣದ್ರಾಕ್ಷಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಮುದುಕರವರೆಗೂ ಇದು ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ನಾವು ನಮ್ಮ ಬಾಲ್ಯದಲ್ಲಿ ಯಾರಿಗೂ ಗೊತ್ತಾಗದಂತೆ ಅಡುಗೆ ಮನೆಗೆ ಹೋಗಿ ಒಣದ್ರಾಕ್ಷಿಯನ್ನು ಕದ್ದು ಆಸೆ ಪಟ್ಟು ತಿನ್ನುತ್ತಿದ್ದೆವು. ಈಗ ಪ್ರಪಂಚ ಬದಲಾಗಿದೆ. ನಾವು ಮೊದಲೆಲ್ಲ ಆಸೆ ಪಟ್ಟು ತಿನ್ನುವಷ್ಟು ಈಗಿನ ಮಕ್ಕಳು ತಿನ್ನುತ್ತಿಲ್ಲ. ಬದಲಾಗಿ ಐಸ್ ಕ್ರೀಮ್, ಡಾರ್ಕ್ ಚಾಕ್ಲೇಟ್ಸ್, ಬರ್ಗರ್, ಪಿಜ್ಜಾ, ಸ್ಯಾಂಡ್‌ವಿಚ್ ಗಳ ಮೊರೆ ಹೋಗುತ್ತಿದ್ದಾರೆ.


ಒಣದ್ರಾಕ್ಷಿ ಇದರ ರುಚಿಯೂ ಸಿಹಿ. ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ದ್ರಾಕ್ಷಿ ಹಣ್ಣನ್ನು ಸೂರ್ಯನ ಬಿಸಿಲಲ್ಲಿ ಒಣಗಿಸಿ ಇದನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಇದು ಹೊಂಬಣ್ಣ ಅಥವಾ ಕಂದು ಬಣ್ಣದಲ್ಲಿರುತ್ತದೆ. ಇದನ್ನು ಪಾಯಸ, ಸಿಹಿತಿಂಡಿಗಳು, ಪುಡ್ಡಿಂಗ್, ಕುಕೀಸ್ ಗಳಲ್ಲಿ ಬಳಸುತ್ತಾರೆ. ನೋಡಲು ಒಣಗಿದಂತಿದ್ದರೂ ನಮ್ಮ ಆರೋಗ್ಯದ ದೃಷ್ಟಿಯಿಂದ ಇದೊಂದು ವರವೇ ಸರಿ. ನೋಡೋಕೆ ಚಿಕ್ಕದಾದರೂ ಇದರ ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಲಾಭ ಮಾತ್ರ ಅತ್ಯಧಿಕ. ಮನುಷ್ಯನಿಗೆ ಪ್ರಕೃತಿ ಮಾತೆಯು ಕೊಟ್ಟ ವರವೇ ಈ ಒಣದ್ರಾಕ್ಷಿ. ಇದನ್ನು ಖಂಡಿತ ನಿಮ್ಮ ದೈನಂದಿನ ಡಯೆಟ್ ನಲ್ಲಿ ಸೇರಿಸಿ ನೋಡಿ.

ಒಣದ್ರಾಕ್ಷಿಯ 16 ಅತ್ಯದ್ಭುತ ಗುಣಗಳ ಬಗ್ಗೆ ಒಂದು ಗಮನ ಕೊಡೋಣವೇ?

1. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ


ಇದರಲ್ಲಿರುವ ಪೋಷಕಾಂಶಗಳು ನಮ್ಮ ಜೀರ್ಣಶಕ್ತಿಯನ್ನು ವೃದ್ಧಿಸುತ್ಹವೆ



2. ರಕ್ತಹೀನತೆಯನ್ನು ಹೊಡೆದೋಡಿಸುತ್ತದೆ


ಒಣದ್ರಾಕ್ಷಿಯಲ್ಲಿ ಕಬ್ಬಿಣ ಹಾಗೂ ಬೀ ಕಾಂಪ್ಲೆಕ್ಸ್ ವಿಟಮಿನ್ ಗಳು ಹೇರಳವಾಗಿರುವುದರಿಂದ ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಿ ಆ ಮೂಲಕ ನಮಗೆ ಅನಿಮಿಯಾ ಬರದಂತೆ ನೋಡಿಕೊಳ್ಳುತ್ತದೆ.



3.ವೈರಸ್ ಹಾಗೂ ಬಾಕ್ಟೇರಿಯಾಗಳ ಸೋಂಕಿನಿಂದ ಬರುವ ಕೆಲವು ಜ್ವರಗಳಿಂದ ನಮ್ಮನ್ನು ರಕ್ಷಿಸುತ್ತದೆ


ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಾಕ್ಟೇರಿಯಲ್ ಗುಣಗಳು ನಮ್ಮ ದೇಹಕ್ಕೆ ವೈರಸ್, ಬಾಕ್ಟೇರಿಯಾ ಸೋಂಕುಗಳಿಂದ ಬರುವ ಜ್ವರಗಳು ಬರದಂತೆ ನೋಡಿಕೊಳ್ಳುತ್ತವೆ.




4. ಕ್ಯಾನ್ಸರ್ ಬರದಂತೆ ನಮ್ಮ ದೇಹವನ್ನು ಕಾಪಾಡುತ್ತದೆ


ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ನಮ್ಮ ದೇಹದಲ್ಲಿ ಗಡ್ಡೆಗಳು ಬೆಳೆಯದಂತೆ ನೋಡಿಕೊಳ್ಳುವ ಮೂಲಕ ಕ್ಯಾನ್ಸರ್ ಬರದಂತೆ ನಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ.



5. ಹೊಟ್ಟೆಯ ಆಮ್ಲತೆಯನ್ನು ಕಡಿಮೆ ಮಾಡುತ್ತದೆ


ಒಣ ದ್ರಾಕ್ಷಿಯಲ್ಲಿರುವ ಪೊಟಾಷಿಯಂ ಮತ್ತು ಮಗ್ನೇಷಿಯಂ ಗಳು ನಮ್ಮ ಹೊಟ್ಟೆಯ ಆಮ್ಲತೆಯನ್ನು ಕಡಿಮೆ ಮಾಡುತ್ತದೆ.



6. ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ


ಇದರಲ್ಲಿನ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೂ ಅತಿ ಅಗತ್ಯವಾದುದರಿಂದ ಕಣ್ಣಿನ ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.



7. ಹಲ್ಲುಗಳ ಆರೋಗ್ಯಕ್ಕೂ ಸಹಕಾರಿ



8. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.



9. ತೂಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.



10. ಮೂಳೆಗಳನ್ನು ಸುದೃಢಗೊಳಿಸುತ್ತದೆ.


11. ಒಳ್ಳೆಯ ನಿದ್ರೆಗೂ ಸಹಕಾರಿ



12. ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.



13. ಹೃದಯ ಮತ್ತು ಮೂತ್ರಪಿಂಡಗಳ ಆರೋಗ್ಯದ ದೃಷ್ಟಿಯಲ್ಲೂ ತುಂಬಾ ಒಳ್ಳೆಯದು.




14. ಹೊಳೆಯುವ ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ.




15. ಕೂದಲ ಉದುರುವಿಕೆಯನ್ನು ತಡೆದು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.



16. ಮಲಬದ್ಧತೆಯನ್ನು ಹೊಡೆದೋಡಿಸುತ್ತದೆ. 


(ಸಂಗ್ರಹ)

No comments:

Post a Comment