Wednesday, 22 January 2020

ಹಸಿ ಮೆಣಸಿನಕಾಯಿ! ಹಿತಮಿತವಾಗಿ ಬಳಸಿದರೆ ಆರೋಗ್ಯ ವೃದ್ಧಿ!!!






ಹಸಿ ಮೆಣಸಿನಕಾಯಿ, ಇದು ನಮ್ಮ ಭಾರತೀಯ ಅಡುಗೆಗಳಲ್ಲಿ ಬಳಸುವ ದಿನನಿತ್ಯದ ತರಕಾರಿಯಾಗಿದೆ. ಸಾಮಾನ್ಯವಾಗಿ ಗೃಹಿಣಿಯರು ತಾವು ಮಾಡುವ ಹೆಚ್ಚಿನ ಅಡುಗೆಗಳಲ್ಲಿ ಅವರವರ ರುಚಿಗೆ, ಅಗತ್ಯಕ್ಕೆ ತಕ್ಕಂತೆ ಹಸಿಯಾಗಿ ಅಥವಾ ಬೇಯಿಸಿದ ರೂಪದಲ್ಲಿ ತಮ್ಮ ಅಡುಗೆಗಳಲ್ಲಿ ಬಳಸುತ್ತಾರೆ.. ಇದು ನಮ್ಮ ಆಹಾರಕ್ಕೆ ಒಂದು ವಿಶೇಷವಾದ ರುಚಿಯನ್ನು ನೀಡುತ್ತದೆ. 

ಇದರಲ್ಲಿ ವಿಟಮಿನ್ ಎ, ಸಿ, ಬಿ6 ಸಮೃದ್ಧವಾಗಿದ್ದು ಪೊಟಾಷಿಯಂ, ಕ್ಯಾಲ್ಶಿಯಮ್, ಐರನ್, ಮಾಗ್ನೆಶಿಯಮ್, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಸ್ವಲ್ಪ ಪ್ರಮಾಣದಲ್ಲಿ ಇವೆ.  ಇದು ಖಾರ ಮಾತ್ರವಲ್ಲ ಇದರಲ್ಲೂ ಕೆಲವು ಔಷಧೀಯ ಗುಣಗಳು ಇವೆ ಎಂದು ಕೆಲವು ಸಂಶೋಧನೆಗಳು ತೋರಿಸಿ ಕೊಟ್ಟಿವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಇದನ್ನು ಹಿತಮಿತವಾಗಿ ನಮ್ಮ ಆಹಾರದಲ್ಲಿ ಬಳಸಿ ಇದರ ಪ್ರಯೋಜನವನ್ನು ಪಡೆಯಬಹುದು.

ಬನ್ನಿ, ಇದರ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭದ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.



1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ






ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳು ಬರದಂತೆ ನಮ್ಮನ್ನು ಕಾಪಾಡುತ್ತದೆ.



2. ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು





ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.



3. ಕ್ಯಾನ್ಸರ್ ರೋಗದಿಂದ ರಕ್ಷಿಸುತ್ತದೆ






ಹಸಿ ಮೆಣಸಿನಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು ವಿಟಮಿನ್ ಎ, ಬೀ ಕಾಂಪ್ಲೆಕ್ಸ್ ಮತ್ತು ಸಿ ರೂಪದಲ್ಲಿ ಇರುವುದರಿಂದ ಕ್ಯಾನ್ಸರ್ ರೋಗವು ಬರದಂತೆ ನಮ್ಮ ದೇಹಕ್ಕೆ ನೈಸರ್ಗಿಕವಾದ ಶಕ್ತಿಯನ್ನು ಒದಗಿಸುತ್ತದೆ.




4. ಡಯಾಬಿಟಿಸ್ ರೋಗಿಗಳಿಗೂ ಒಳ್ಳೆಯದು






ಹಸಿ ಮೆಣಸಿನಕಾಯಿಯು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ ಎಂದು ಕೆಲವು ಸಂಶೋಧನೆಗಳು ತೋರಿಸಿ ಕೊಟ್ಟಿವೆ. ಅದರಿಂದ ಮಧುಮೇಹ ರೋಗಿಗಳು ಇದನ್ನು ಅಗತ್ಯ ಪ್ರಮಾಣದಲ್ಲಿ ಬಳಸಬಹುದು.


5. ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ







ಇದನ್ನು ಪುರುಷರು ಪ್ರತಿದಿನ ತಮ್ಮ ಆಹಾರದಲ್ಲಿ ಮಿತವಾಗಿ ಬಳಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಬಹುದು.



6. ಆಹಾರವು ಬಲು ಬೇಗ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ





ಇದರಲ್ಲಿರುವ ಸಮೃದ್ಧವಾದ ನಾರಿನ ಅಂಶವು ನಮ್ಮ ಆಹಾರ ಬೇಗ ಜೀರ್ಣವಾಗುವಂತೆ ಮಾಡುತ್ತದೆ.


7. ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ




ಇದು ನಮ್ಮ ಮೆದುಳಿನಲ್ಲಿ ಎಂಡೊರ್ಫಿನ್ಸ್ ನ್ನು(ಖುಷಿಯನ್ನು ಕೊಡುವ ಹಾರ್ಮೋನುಗಳು) ಬಿಡುಗಡೆ ಮಾಡುತ್ತದೆ. ಇದು ನಮ್ಮ ಮೂಡ್ ನ್ನು ಬದಲಾಯಿಸುವ ಮೂಲಕ ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ.


8. ಶ್ವಾಸಕೋಶದ ರೋಗಗಳಿಂದ ಕಾಪಾಡುತ್ತದೆ






ಶೀತ, ಕಫ ಮತ್ತು ಶ್ವಾಸಕೋಶದ ಸಂಬಂಧಿ ರೋಗಗಳಿಂದ ನಮಗೆ ರಕ್ಷಣೆ ಒದಗಿಸುತ್ತದೆ.



9. ಬಾಕ್ಟೀರಿಯ ಸಂಬಂಧಿ ಸೋಂಕುಗಳನ್ನು ತಡೆಗಟ್ಟುತ್ತದೆ






ಹಸಿಮೆಣಸಿನಕಾಯಿಯಲ್ಲಿ ಆಂಟಿ ಬಾಕ್ಟೀರಿಯಲ್ ಗುಣಗಳು ರುವುದರಿಂದ ಸೋಂಕುಗಳು ಅದರಲ್ಲೂ ಚರ್ಮದ ಸೋಂಕುಗಳು ಬರದಂತೆ ರಕ್ಷಿಸುತ್ತದೆ.


10. ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ




                         

ಹಸಿ ಮೆಣಸಿನಕಾಯಿಯಲ್ಲಿ ಕ್ಯಾಲ್ಶಿಯಮ್ ಹೇರಳವಾಗಿದ್ದು ನಮ್ಮ ಮೂಳೆಗಳು ಸುದೃಢವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.


(ಸಂಗ್ರಹ)

No comments:

Post a Comment