ಚಳಿಗಾಲ ಅಂದರೆ ನಮಗೆ ನೆನಪಾಗುವುದು ಬಿಸಿ ಬಿಸಿ ಕಾಫೀ ಅದರ ಜೊತೆ ಬಿಸಿ ಬಿಸಿ ಬೋಂಡಾಗಳು ಅಲ್ವಾ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹಣ್ಣು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಆದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಇತರ ಕಾಲದಂತೆ ಚಳಿಗಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಅಗತ್ಯ. ಇದರಲ್ಲಿರುವ ವಿಟಮಿನ್ ಗಳು ನಮ್ಮ ದಿನನಿತ್ಯದ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.
ಚಳಿಗಾಲದ ಆಹಾರದ ಬಗ್ಗೆ ತಿಳುವಳಿಕೆ ಅಗತ್ಯ ಏಕೆಂದರೆ ಕೆಲವು ಆಹಾರಗಳು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಹಾಗಾಗಿ ಚಳಿಗಾಲದ ಆಹಾರದ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಚಳಿಗಾಲದಲ್ಲಿ ಸೇವಿಸಬಹುದಾದ ಹಣ್ಣು ತರಕಾರಿಗಳ ಬಗ್ಗೆ ನೋಡೋಣ.
1. ದಾಳಿಂಬೆ ಹಣ್ಣು
ದಾಳಿಂಬೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು ಕೆಟ್ಟ ಕೊಲೆಸ್ಟ್ರಾಲ್ ನ್ನು ತಡೆಗಟ್ಟಿ ಹೃದಯದಲ್ಲಿ ರಕ್ತ ಚಲನೆಯನ್ನು ಸರಾಗವಾಗುವಂತೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
2. ದ್ರಾಕ್ಷಿಗಳು
ದ್ರಾಕ್ಷಿಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಸಹಾಯ ಮಾಡುತ್ತದೆ. ಮಲಬದ್ದತೆಯನ್ನು ನಿವಾರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ ಬ್ಲಡ್ ಪ್ರೆಶರ್ ನ್ನು ನಿಯಂತ್ರಿಸುತ್ತದೆ.
3. ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲಾಗದಂತೆ ತಡೆಯುತ್ತದೆ. ಚರ್ಮ ಹಾಗೂ ಕಣ್ಣುಗಳ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
4. ಸಿಹಿ ಗೆಣಸು
ಇದರಲ್ಲಿ ವಿಟಮಿನ್ ಎ, ಬಿ6, ಇ, ಬೀಟಾ ಕರೋಟಿನ್ ಹೇರಳವಾಗಿದ್ದು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
5. ಕ್ರ್ಯಾನ್‌ಬೆರೀಸ್
ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಇದರ ಕ್ರಮಬದ್ಧ ಸೇವನೆಯಿಂದ ಸ್ತನ, ಕರುಳು, ಪ್ರಾಸ್ಟೇಟ್ ಟ್ಯೂಮರ್ ಬರದಂತೆ ತಡೆಗಟ್ಟಬಹುದು.
(ಸಂಗ್ರಹ)





No comments:
Post a Comment