Saturday, 3 October 2020

*Vitamin C rich fruits*
1.Citrus fruits-- Orange/sweetlime/Lemon -Powerhouse of Vitamin C
2. Papaya
3. Guava(ಸೀಬೆ/ಪೇರಳೆ ಹಣ್ಣು)
4. Indian gooseberries(ನೆಲ್ಲಿಕಾಯಿ)
5. Blackcurrant
6. Pineapple 
7. Grapes
8. Mango
9. ಬೆರ್ರಿ ಹಣ್ಣುಗಳು
10. Pomegranate (ದಾಳಿಂಬೆ)
11. Custard apples
12. Lychees
13. Melons

*Vitamin C rich vegetables*
1. All green leafy vegetables
2. Cabbage
3. Tomatoes
4. Bitter gourd
5. Potatoes
6. Papayas
7. Ladies finger
8. Sweet potatoes
9. Cauliflower
10. Capsicums
11.Fresh green peas

*Folic acid rich foods*
--> All green leafy vegetables
--> Banana 
--> sprouts( ಮೊಳಕೆ ಬರಿಸಿದ ಕಾಳುಗಳು)
--> Beans
--> ಹುರುಳಿಕಾಳು
--> ಕಡಲೆಕಾಯಿ
--> cauliflower
--> Peanuts
--> Broccoli

*Iron rich foods*
*Veg food/ ಸಸ್ಯಾಹಾರಿ*
ಸೊಪ್ಪು ತರಕಾರಿಗಳು
-->ಬೇಳೆ ಕಾಳುಗಳು
-->Dry fruits--> grapes, ಖರ್ಜೂರ
-->Beetroot
-->Pomegranate ( ದಾಳಿಂಬೆ)

ಮಾಂಸಾಹಾರಿ/ Non-Veg

-->ಮೊಟ್ಟೆ(Egg)
-->Pranigala liver
-->ಕೋಳಿಮಾಂಸ
-->ಮೀನು
--> meat ಇತ್ಯಾದಿ

*Vitamin B12 rich foods*
Haemoglobin ಉತ್ಪಾದನೆಗೆ vit B12ಕೂಡ ಅವಶ್ಯ. Vit B12 ಇರುವ ಆಹಾರಗಳು
ಮಾಂಸಾಹಾರಿಗಳು ಪ್ರಾಣಿಗಳ liver ಮತ್ತು kidney ಗಳಲ್ಲಿ ಇರುತ್ತದೆ. ಸಸ್ಯಾಹಾರಿಗಳಿಗೆ ಹಾಲು ಮತ್ತು ಹಾಲಿನ ಉತ್ತ್ಪನ್ನ ಗಳಲ್ಲಿ ಇರುತ್ತದೆ.

Thursday, 1 October 2020

ಕರಿಬೇವು_ರೈಸ್

#ಕರಿಬೇವು_ರೈಸ್
ಇದು ರಾಜ್ಮುಂಡ್ರಿ ಹೋದಾಗ ಅಲ್ಲಿನ ಹೈವೆ ಧಾಬಾ ಒಳಗ ತಿಂದಿದ್ದೆ ಪುಳಿಯುಗರೆ ಹೋಲುವ ಇದು ಅದಕ್ಕಿಂತಲೂ ವಿಶಿಷ್ಟ ಅನ್ನ ಒಳ್ಳೆ ರುಚಿ ಮತ್ತು ಬಣ್ಣ, ದೇಹಕ್ಕೂ ತಂಪು
ಅಲ್ಲಿ ಮಾಡುವವನು ಕಡೆ ಕೇಳಿದಾಗ ತೆಲುಗು ಲೀ ಹೇಳಿದ್ದು ಅರ್ಧ ಅರ್ಥ ಆಗಿ ಆದೆ ನೆನಪಲ್ಲಿ ಇವತ್ತು ಮಾಡಿದೆ 
ಭಾಳ ಅಂದ್ರ ಭಾಳ ಛಂದ ಭಾಳಾ ಇಷ್ಟ ಆಗಿದ್ದು ಅಂದ್ರ ಮಸಾಲೆ ಅಂದ್ರ ಕೊತ್ತಂಬರಿ ಬೀಜ ಅಂತೀವಿ ಅದ್ರ ಕೊತ್ತಂಬರಿ ಬೀಜ ಇಲ್ಲದ ಮಸಾಲೆ ಅನ್ನ ಭಾಳ ಹಿಡಿಸಿತು

ಮುಖ್ಯವಾಗಿ ಬೇಕಾಗಿದ್ದು ಬಿಡಿ ಬಿಡಿ ಉದುರೂ ಅನ್ನ ಮತ್ತ ದೊಡ್ಡ ಎಲೆಯ ಕರಿಬೇವು ಕಡು ಹಸಿರು ಇರುವವು
ಅವನು ಹೆಂಗ್ ಹೇಳಿದ್ದ ಹಂಗ ಮಾಡಿದ್ದು
ಮಸಾಲೆ ಅರ್ಧ ಎಣ್ಣೆ ಒಳಗ ಹುರಿದು ಮತ್ತ ಮ್ಯಾಲೆ ನು ಹಾಕಿ ಮಾಡಿದ್ದ ಹಂಗ ಮಾಡಿನಿ 

ಹೆಂಗ್ ಮಾಡಿದೆ ನೋಡೋಣ ಬರ್ರಿ

ಉದುರು ಅನ್ನ ಆರಿ ಇಡೀ ಅನ್ನ ಆಜುಮಾಸು 1 ಬೌಲ್ ಇರಬೇಕು ಅಂದ್ರ ಒಂದು ವರೆ ಪಾವು ಅಕ್ಕಿ ಅನ್ನ 

ಕರಿಬೇವು ಚಂದ ತೊಳೆದು ಎಲೆ ಬಿಡಿಸಿ ಚಂದ್ ಒರಸಿ ಆರಿಡಿ ಇದು ಅಜುಮಾಸು ಎರಡು ಕಪ್ ಇರ್ಬೇಕು 

ಮಸಾಲೆ ಹೆಂಗ್ ಮಾಡೋದು

ಪಾತ್ರೆ ಬಿಸಿ ಮಾಡಿ ಒಂದು ಸ್ಪೂನ್ ಎಣ್ಣೆ ಹಾಕಿ ತಲಾ ಒಂದು ಸ್ಪೂನ್ ಕಡ್ಲೆಬೇಳೆ, ತೊಗರಿ ಬೇಳೆ, ಉದ್ದಿನಬೇಳೆ, ಸಾಸಿವೆ,ಜೀರಿಗೆ, ಕರಿಮೆಣಸು, ಎಳ್ಳು, ಹುಣಸೆ ಹಣ್ಣು ಹಾಕಿ ಬೆಳೆಗಳು ಚಂದ ನಸು ಕೆಂಪಗೆ ಹುರಿಯಿರಿ

ಈಗ ಇದಕ್ಕ ಕರಿಬೇವು, ಹಿಂಗು,ಚೀಟಿ ಅರ್ಷಿನ,ಹಾಕಿ ಚಂದ್ ಹುರಿದು ತಣ್ಣಗಾಗಲು ಬಿಡಿ
ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ

ರೈಸ್ ಮಾಡೋದು

ಪಾತ್ರೆ ಬಿಸಿ ಮಾಡಿ ಚಂದ ಎಣ್ಣೆ ಮತ್ತು ಚೂರು ಬೆಣ್ಣೆ(ಡಾಬಾ ಸ್ಟೈಲ್ ಅದಕ್ಕ ಬೆಣ್ಣೆ ಇಲ್ಲ ಅಂದ್ರ ತುಪ್ಪ ನಡಿತದ) ಹಾಕಿ ಸೈಸ್ವೆ ಜೀರಿಗೆ ಸಿಡಿಸಿ ಒಂದು ಹಿಡಿ ಶೇಂಗಾ ಸಣ್ಣ ಹೆಚ್ಚಿದ ಹಸಿ ಮೆಣಸು, ಸಣ್ಣ ಹೆಚ್ಚಿದ ಉಳ್ಳಾಗಡ್ಡಿ ಹಾಕಿ ಚಂದ್ ಹುರಿದು ಬಿಡಿ
ಉಳ್ಳಾಗಡ್ಡಿ ನಸು ಕೆಂಪಗೆ ಆದಮ್ಯಲೆ ಅರ್ಧ ರುಬ್ಬಿದ ಮಸಾಲೆ(ಇನ್ನ ಅರ್ಧ ಆಮ್ಯಾಲೆ) ಹಾಕಿ ಚೂರು ಹುರಿದು ತಕ್ಷಣ ಮೇಲೆ ಅನ್ನ, ಉಪ್ಪು, ಚೀಟಿ ಸಕ್ಕರೆ ಹಾಕಿ ಚಂದ ಕಲಸಿ
ಈಗ ಮತ್ತೆ ಇದರ ಮ್ಯಾಲೆ ಇನ್ನ ಅರ್ಧ ಮಸಾಲೆ,ಹಾಕಿ ಚಂದ್ ಎಲ್ಲ ಮಸಾಲೆ ಹೊಂಡುವಂಗ ಕಲಸಿ 
ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ ಇಳಿಸಿ

Monday, 17 August 2020

ಆಲೂಗೆಡ್ಡೆ ಮತ್ತು ಆರೋಗ್ಯ

ಆಲೂಗೆಡ್ಡೆ ಮತ್ತು ಆರೋಗ್ಯ. 

ನಮ್ಮ ದೇಶದಲ್ಲಿ ಗೋದಿ ಮತ್ತು ಅಕ್ಕಿಯ ನಂತರ ಅತೀ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿರುವ ಆಹಾರ ಪದಾರ್ಥವೆಂದರೆ ಆಲೂಗೆಡ್ಡೆ ಅಥವ ಬಟಾಟೆ. ಜೊತೆಗೆ ನಮ್ಮ ಆರೋಗ್ಯಕ್ಕೆ ಇದರ ಸೇವನೆ ಬಗ್ಗೆ  ಇರುವ ಭಿನ್ನಾಭಿಪ್ರಾಯಗಳು ಸಹಾ ಹೆಚ್ಚು. ಆಲೂಗಡ್ಡೆ ವಾಯು ಪದಾರ್ಥ ಎಂಬುದರಿಂದ ಹಿಡಿದು, ಬೊಜ್ಜು ಹೆಚ್ಚಾಗುತ್ತೆ, ಸಕ್ಕರೆ ಖಾಯಿಲೆಯವರು ತಿನ್ನಬಾರದು ಇತ್ಯಾದಿ.. ಇತ್ಯಾದಿ.. ಹಾಗಾದರೆ ನಿಜ ಯಾವುದು..? ವಿವರವಾಗಿ ತಿಳಿದುಕೊಳ್ಳೋಣ.

ಆಲೂಗೆಡ್ಡೆ ನೆಲದಡಿ ಬಿಡುವ ಗೆಡ್ಡೆ. ಸಸ್ಯ ಶಾಸ್ತ್ರೀಯ ಹೆಸರು Solanum tuberosum ಹಾಗೂ ಕುಟುಂಬ Solanaceae. ( ಚಿತ್ರ ನೋಡಿ ). ಮೂಲ ಪೆರು ದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ,  ಸುಮಾರು 10,000 ವರ್ಷಗಳ ಇತಿಹಾಸವಿರುವ,  ಇದು ಅಮೆರಿಕ ದೇಶಕ್ಕೆ ಬಂದು ನಂತರ ಇತರೆಡೆ ಪ್ರಚಾರಗೊಂಡಿತು. ಸದ್ಯ ವಿಶ್ವದಾದ್ಯಂತ 5,100 ಕ್ಕೂ ಹೆಚ್ಚು ಆಲೂಗೆಡ್ಡೆ ಪ್ರಬೇದಗಳಿವೆ.

ಆಲೂಗೆಡ್ಡೆಯಲ್ಲಿ ಅತೀ ಹೆಚ್ಚು ಪಿಷ್ಟ ( Carbohydrates ) ಇದೆ ಹಾಗಾಗಿ ಆರೋಗ್ಯಕ್ಕೆ ಹಾನಿಕರ, ಸಕ್ಕರೆ ಖಾಯಿಲೆ ಇರುವವರು ತಿನ್ನಬಾರದು ಎಂದು ಹೆಚ್ಚಿನ ಅಭಿಪ್ರಾಯ. ಆದರೆ ನಿಜವಾಗಿಯೂ ಇದರಲ್ಲಿರುವ Carbohydrates ಕೇವಲ 17 gms ( ಅಕ್ಕಿಯಲ್ಲಿ 28 - 35 gms ಹಾಗೂ ಗೋದಿಯಲ್ಲಿ 18 gms ) ಈಗ ಯಾವುದು ಉತ್ತಮ ನೀವೇ ನಿರ್ದರಿಸಿ.

ಆಲೂಗೆಡ್ಡೆಯಲ್ಲಿರುವ Cholesterol - 0% ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಲ್ಲದೆ ರಕ್ತದೊತ್ತಡ ಹೆಚ್ಚಿಸುವ Sodium ಸಹಾ ಕೇವಲ 0%. 

75 mg ನಷ್ಟು ಇರುವ Phosphorus ಹಾಗೂ ಸುಣ್ಣದ ಅಂಶ ( Calcium )  ನಮ್ಮ ದೇಹದ ಮೂಳೆಗಳು ಸದೃಢವಾಗಲು ಸಹಕಾರಿ.

544 mg ನಷ್ಟು ಇರುವ Potassium ನಮ್ಮ ರಕ್ತದಲ್ಲಿರುವ ಹೆಚ್ಚಿನ ಉಪ್ಪಿನಂಶವನ್ನು ಹೀರಿಕೊಂಡು ಅಧಿಕ ರಕ್ತದೊತ್ತಡ -  BP - ತಗ್ಗಿಸಲು ಸಹಾಯಮಾಡುತ್ತದೆ.

ಆಲೂಗೆಡ್ಡೆಯಲ್ಲಿರುವ ಅಧಿಕ ನಾರಿನಂಶ ( fibre ) ದೇಹದಲ್ಲಿರುವ Cholesterol ಅನ್ನು ನಿಯಂತ್ರಣದಲ್ಲಿರುಸುತ್ತದೆ, ಮಲಬದ್ಧತೆ ನಿವಾರಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.  ಈ ಮೊದಲೇ 0 % ಇರುವ cholesterol ಜೊತೆಗೆ Potassium, ವಿಟಮಿನ್ - C, ಹಾಗು ವಿಟಮಿನ್ B - 6 ಎಲ್ಲಾ ಸೇರಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.

Choline ಎಂಬ ವಿಶಿಷ್ಟ ರಾಸಾಯನಿಕ 57 mg ನಷ್ಟು ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯಮಾಡುತ್ತದೆ ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.

38 mg ಯಷ್ಟು ಇರುವ Folate ಅಂಶ ಕ್ಯಾನ್ಸರ್ ನಿವಾರಕವಾಗಿದ್ದು. ಜೀವ ಕಣಗಳು ( Cells )  ಕ್ಯಾನ್ಸರ್ ಕಣಗಳಾಗಿ ಬದಲಾಗದಂತೆ ತಡೆಯುತ್ತದೆ.

ಆಲೂಗೆಡ್ಡೆ ನಮ್ಮ ಚರ್ಮದ ಬಹುತೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರೆ ರಸ ತೆಗೆದು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದರೆ ಚರ್ಮ ಸುಕ್ಕು ರಹಿತವಾಗುವುದು ಹಾಗು ಕಾಂತಿಯುತವಾಗುವುದು. ಹಳೆಯ ಕಲೆಗಳು, Sun burn ಕಲೆಗಳು, Pigmentation ನಿವಾರಿಸುವುದು. ಆಲೂಗೆಡ್ಡೆಯ fresh ಆದ ಸಿಪ್ಪೆಯನ್ನು ತೆಗೆದು ಹಚ್ಚಿದರೆ ಸುಟ್ಟ ಗಾಯ ಬೇಗ ವಾಸಿಯಾಗುತ್ತೆ ಮತ್ತು ಕಲೆ ಇಲ್ಲದ ಹೊಸ ಚರ್ಮ ಬರುತ್ತೆ.

ಅತ್ಯಂತ ಪ್ರಮುಖವಾಗಿ ಆಲೂಗೆಡ್ಡೆಯಲ್ಲಿ Alpha Lipoic acid ಎಂಬ ಮತ್ತೊಂದು ವಿಶಿಷ್ಟವಾದ ರಾಸಾಯನಿಕವಿದ್ದು ಇದು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆ ( Glucose  ಅಂಶವನ್ನು ಹಾಗೆ ಬಿಡದೆ, ಅಂದರೆ blood sugar ಜಾಸ್ತಿಯಾಗಲು ಬಿಡದೆ ) ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ( Diabetes ) ಇರುವವರು ಆಲೂಗೆಡ್ಡೆ ಸೇವಿಸಲು ಯಾವುದೇ ತೊಂದರೆಯಿಲ್ಲ.

ಮತ್ತೊಂದು ತಪ್ಪದೆ ಎಲ್ಲರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಆಲೂಗೆಡ್ಡೆಯಲ್ಲಿ ಒಟ್ಟಾರೆ 3 ಪದರಗಳಿದ್ದು ಅವು,  ಹೊರ ಸಿಪ್ಪೆ, ಒಳ ಸಿಪ್ಪೆ ಮತ್ತು ಒಳಗಿನ ನೀರಿನಂಶ ಹೆಚ್ಚಿರುವ ಬರೀ ಪಿಷ್ಟವಿರುವ ( Corbohydrates ) ಭಾಗ. ( ಒಮ್ಮೆ ಬೇಯಿಸಿದ ಮದ್ಯೆ ಕತ್ತರಿಸಿದ ಆಲೂಗೆಡ್ಡೆಯನ್ನು ಗಮನಿಸಿ, ಗೊತ್ತಾಗುತ್ತದೆ )

 ಹೊರ ಸಿಪ್ಪೆಯನ್ನು ತೆಗೆದು ಹಾಕಿಬಿಟ್ಟರೆ ಆಲೂಗೆಡ್ಡೆಯ ಪ್ರಮುಖ ಅಂಶಗಳನ್ನು ನಾಶಮಾಡಿ ಕೇವಲ Carbohydrates ಸೇವಿಸಿದಂತೆ. ಜೊತೆಗೆ ಹೆಚ್ಚಿನ ತಾಪಮಾನದಲ್ಲಿ ಅಂದರೆ ಎಣ್ಣೆಯಲ್ಲಿ ಆಲೂಗೆಡ್ಡೆಯನ್ನು ಕರಿದರೆ ( deep fry ಮಾಡಿದರೆ ) ಅದರಿಂದ ಆಲೂಗೆಡ್ಡೆಯಲ್ಲಿರುವ ಎಲ್ಲಾ ಪೌಷ್ಟಿಕಗಳೂ ನಾಶವಾಗುವುದು. ಆದ್ದರಿಂದ ಆದಷ್ಟು ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸಮೇತ ಬೇಯಿಸಿ ನಂತರ ಬೇಕಾದರೆ ಸಿಪ್ಪೆ ತೆಗೆದು ಸೇವಿಸಬಹುದು.

ಮತ್ತೊಂದು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ಆಲೂಗೆಡ್ಡೆಯನ್ನು ಈರುಳ್ಳಿಯ ಜೊತೆ ಇಡಬಾರದು. ಕಾರಣ ಇವೆರಡರಿಂದಲೂ ಹೊರಹೊಮ್ಮುವ ನೈಸರ್ಗಿಕ ಅನಿಲಗಳು ( gas ) ಪರಸ್ಪರ ಬೇಗ ಕೊಳೆತು ಹೋಗುವಂತೆ ಮಾಡುತ್ತದೆ.

ಇನ್ನುಮುಂದೆ ಧೈರ್ಯವಾಗಿ ಆಲೂಗೆಡ್ಡೆ ತಿನ್ನಿ. ಆಲೂಗೆಡ್ಡೆ ತಿನ್ನುವುದರಿಂದ ದಪ್ಪ ಆಗಲ್ಲ, ಶುಗರ್ ಬರಲ್ಲ.

ಚಿತ್ರ, ಲೇಖನ :-  ಮಂಜುನಾಥ್ ಪ್ರಸಾದ್..

ಗರಿಕೆ ಹುಲ್ಲು

" ಗರಿಕೆ ಹುಲ್ಲು " ಎಲ್ಲರಿಗೂ ಗೊತ್ತು. ಗ್ರಾಮೀಣ ಭಾಷೆಯಲ್ಲಿ ಕರಿಕೆ , ಗರಿಕೆ , ಅಮರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಆಂಗ್ಲ ಭಾಷೆಯಲ್ಲಿ..Durva Grass, Doob Grass,
Devil Grass (cynodon dactylon ವೈಜ್ಞಾನಿಕ ಹೆಸರು) ಇನ್ನೂ ಹಲವಾರು ಹೆಸರುಗಳಿವೆ.

ಸಂಸ್ಕೃತ ಭಾಷೆಯಲ್ಲಿ...ಅಮರಿ , ಅಮೃತಾ , ದೂರ್ವಾ ಇತ್ಯಾದಿ.

ಹಿಂದಿ ಭಾಷೆಯಲ್ಲಿ...ದೂಬ್, ರಾಮಘಾಸ್, ದೂರ್ಬಾ ಇತ್ಯಾದಿ.

ತುಳಸಿಯ ನಂತರ ಗರಿಕೆ ಹುಲ್ಲು ಹೆಚ್ಚಿನ ಪ್ರಾಮುಖ್ಯತೆ  ಪಡೆದಿದೆ.

ಶ್ರೀ ಕೃಷ್ಣನಿಗೆ ತುಳಸಿಯ ಅರ್ಚನೆ ಮಾಡಿದರೆ, ವಿಘ್ನನಿವಾರಕ ಗಣೇಶನಿಗೆ ಗರಿಕೆ ಹುಲ್ಲಿನ ಅರ್ಚನೆ ಮಾಡಲಾಗುತ್ತದೆ.

ಗರಿಕೆ ಹುಲ್ಲು ಒಂದು ಕಡೆ ಬೇರು ಬಿಟ್ಟರೆ ಹಿಂದೆ ಹಾಗೇ ಬೇರುಗಳನ್ನು ಬಿಡುತ್ತ ತ್ವರಿತವಾಗಿ ಬೆಳೆಯುತ್ತದೆ. ಹೊಲದಲ್ಲಿ ಬೆಳೆಯಲು ಬಿಟ್ಟರೆ ನಿವಾರಿಸಲು ಬಹಳೇ ಕಷ್ಟ ಪಡಬೇಕಾಗುತ್ತದೆ. ಏಕೆಂದರೆ ಗರಿಕೆ ಹುಲ್ಲಿನ ಬೇರುಗಳು 01 ರಿಂದ 02 ಮೀಟರ್ ಆಳದವರೆಗೂ ಇಳಿದು ಬಿಡುತ್ತವೆ. 

ಸರ್ವ ರೋಗ ನಿವಾರಕವಾಗಿ ಕೆಲಸ ಮಾಡುವ ಈ ಗರಿಕೆ ಹುಲ್ಲಿಗೆ ಅಮೃತ ಹುಲ್ಲು ಎಂದೂ ಕರೆಯಲಾಗಿದೆ

        { ಗರಿಕೆ ಹುಲ್ಲಿನ ಪ್ರಯೋಜನಗಳು} 

* ಚರ್ಮರೋಗ ಗಳಿಗೆ... ಇದರ ರಸದಲ್ಲಿ ಅರಿಶಿನ ಪುಡಿ ಹಾಕಿ ಲೇಪಿಸಬೇಕು.  ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಯಲ್ಲಿ ಗರಿಕೆ ಹುಲ್ಲನ್ನು ಕುದಿಸಿ ಉಪಯೋಗಿ ಸಬಹುದು.

* 20 ರಿಂದ 30 ML ರಸ ಜೇನು ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.

* ಬೊಜ್ಜು ಕರಗಿಸಲು ಸಹಕಾರಿಯಾಗಿದೆ.

* ಹೊಟ್ಟೆ ನೋವಿಗೆ ರಸ ಸೇವನೆ ಉಪಯುಕ್ತವಾಗಿದೆ.

* ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು.

*ವಸಡಿನ ರಕ್ತ ಸ್ರಾವ ನಿವಾರಕ ವಾಗಿ ಕೆಲಸ ಮಾಡುತ್ತದೆ.

*ಕಿವಿ ನೋವಿಗೆ, ಶುಭ್ರವಾದ ಬಟ್ಟೆಯಲ್ಲಿ ರಸ ಸೋಸಿ ನಾಲ್ಕೈದು ಹನಿ ಹಾಕಬಹುದು.

* ಮಧುಮೇಹಿಗಳಿಗೆ ಕೂಡ ಉತ್ತಮ.

*ಗರಿಕೆ ಹುಲ್ಲಿನ ರಸದಲ್ಲಿ ಕೊಬ್ಬರಿ ಎಣ್ಣೆ ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆ ಗಟ್ಟುತ್ತದೆ, ಕೇಶ ಕಾಂತಿ ಹೆಚ್ಚುತ್ತದೆ.

*ಉಗುರು ಸುತ್ತಿಗೆ... ರಸದಲ್ಲಿ ಅರಿಶಿನ ಮತ್ತು ಸುಣ್ಣ ಬೆರೆಸಿ ಹೆಚ್ಚಬೇಕು.

* ಬೆಳೆಯುವ ಮಕ್ಕಳಿಗೆ 10ML ರಸಕ್ಕೆ ಜೇನು ಬೆರೆಸಿ ಕುಡಿಸಬೇಕು.

*ಕಣ್ಣು ನೋವು, ಕಣ್ಣುಗಳು ಕೆಂಪಾದಾಗ ಗರಿಕೆ ಹುಲ್ಲನ್ನು ಕುಟ್ಟಿ ಕಣ್ಣುಗಳನ್ನು ಮುಚ್ಚಿ ಬಿಳಿ ಬಟ್ಟೆ ಹಾಕಿಕೊಂಡು ರೆಪ್ಪೆಗಳ ಮೇಲೆ ಇಡಬೇಕು.

*ಗರಿಕೆ ಹುಲ್ಲಿನ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಉರಿ ಮೂತ್ರ ನಿವಾರಕ ವಾಗಿ ಕೆಲಸ ಮಾಡುತ್ತದೆ.

    ಪ್ರೋಟಿನ್, ವಿಟಮಿನ್, ಕಾರ್ಬೋಹೈಡ್ರೇಟ್, ಮೆಗ್ನೀಷಿಯಂ, ಸೋಡಿಯಂ ಇತ್ಯಾದಿ ಅಂಶಗಳು ಇರುವ ಈ ಗರಿಕೆ ಹುಲ್ಲಿನ ರಸ ಸೇವನೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. S.H.Nadaf

ಮಹಿಳೆಯರಿಗೆ ಅನುಕೂಲವಾಗುವ ಸುಲಭವಾದ ಅಡುಗೆ ಮನೆ ಟಿಪ್ಸ್

ಮಹಿಳೆಯರಿಗಾಗಿ ಕೆಲವು ಸುಲಭವಾದ ಅಡುಗೆ ಮನೆಯ ಬಗ್ಗೆ ಅಡುಗೆ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳೋಕೆ ಕೆಲವು ಟಿಪ್ಸ್ ಹಾಗೂ ಟ್ರಿಕ್ಸ್ ಗಳನ್ನು ಇಲ್ಲಿ ತಿಳಿಸಿದ್ದೇವೆ. ಬಟ್ಟೆಯ ಮೇಲೇ ಆಗುವಂತಹ ಪೆನ್ ಅಥವಾ ಪೆನ್ಸಿಲ್ ನ ಮಾರ್ಕ್ ಅನ್ನು ಹೇಗೆ ತೆಗೆಯೋದು ಅನ್ನೋದನ್ನ ನೋಡೋಣ. ಈ ತರ ಮಾರ್ಕ್ ಆದಾಗ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ತೆಗೆಯಬಹುದು. ಪೆನ್ ಇಂದ ಮಾರ್ಕ್ ಆದ ಬಟ್ಟೆಯ ಮೇಲೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಒಂದು ಒಣಗಿದ ಬಟ್ಟೆಯಿಂದ ಒರೆಸಿದರೆ ಮಾರ್ಕ್ ಗಳು ಹೋಗತ್ತೇ.

ಫ್ರಿಡ್ಜ್ ಮೇಲೆ ಆಗಿರುವ ಒದ್ದೆ ಕೈ ಇಂದ ಮುಟ್ಟಿದ ಕಲೆ ಇರಬಹುದು ಅಥವಾ ಎಣ್ಣೆಯ ಕಲೆ ಇವನ್ನೆಲ್ಲ ಹೇಗೆ ತೆಗಿಯೋದು ಅನ್ನೋದನ್ನ ನೋಡೋಣ. ಒಂದೋ ಬೌಲ್ ಗೆ ಇಂದು ಟೀ ಸ್ಪೂನ್ ಅಡುಗೆ ಸೋಡಾ ಹಾಗೂ ಒಂದೂವರೆ ಸ್ಪೂನ್ ಅಷ್ಟು ವಿನೆಗರ್ ಹಾಕಿ ಮಿಕ್ಸ್ ಮಾಡಿ, ಒಂದು ಸ್ಕ್ರಬರ್ ನಿಂದ ವಿನೆಗರ್ ಸೋಡಾ ಮಿಶ್ರಣವನ್ನು ಹಚ್ಚಿ ನಂತರ ಒದ್ದೆ ಬಟ್ಟೆ ಇಂದ ಒರೆಸಿ ನಂತರ ಒಣಗಿದ ಬಟ್ಟೆಯಿಂದ ಇರೆಸಿದ್ರೆ ಕ್ಲೀನ್ ಆಗತ್ತೆ. ಈ ರೀತಿ ವಾರಕ್ಕೆ ಒಮ್ಮೆ ಆದರೂ ಮಾಡುವುದರಿಂದ ಫ್ರಿಡ್ಜ್ ಮೇಲೆ ಕಲೆಗಳು ಆಗಲ್ಲ.

ಬಾಚಣಿಗೆಯಲ್ಲಿ ಇರುವಂತಹ ಕೊಳೆಯನ್ನ ತೆಗಿಯೋದು ತುಂಬಾ ಕಿರಿಕಿರಿ. ಸೂಜಿ ಅಥವಾ ಪಿನ್ ತಗೊಂಡು ಒಂದೊಂದೇ ಹಲ್ಲಿನಲ್ಲಿ ಕೆಸರನ್ನ ತೆಗಿಯೋಕೆ ಬೇಜಾರು ಅಂದ್ರೆ ಹೀಗೆ ಮಾಡಿ ಒಂದು ಟಬ್ ನಲ್ಲಿ ನೀರು ಹಾಕಿ ಬಾಚಣಿಕೆಯನ್ನ ಇಟ್ಟು ಸ್ವಲ್ಪ ವಿಮ್ ಜೆಲ್ ಅಥವಾ ಬಟ್ಟೆ ಸೋಪು ಏನಾದರೂ ಬಳಸಿಕೊಂಡು ಬಟ್ಟೆ ತಿಕ್ಕುವ ಬ್ರಶ್ ನಿಂದ ತಿಕ್ಕಿದರೆ ಒಮ್ಮೆಗೆ ಬಾಚಣಿಗೆಯಲ್ಲಿನ ಕೆಸರು ಹೋಗತ್ತೆ ಎಣ್ಣೆಯ ಜಿಡ್ಡೂ ಕೂಡಾ ಹೋಗತ್ತೆ.

ಇನ್ನೂ ಕೆಲವೊಮ್ಮೆ ಅಡುಗೆ ಮನೆಯಲ್ಲಿ ಎಣ್ಣೆ ಜಿಡ್ಡು ಎಲ್ಲವೂ ಸೇರಿ ಟೈಲ್ಸ್ ಕೂಡಾ ಕಲೆ ಆಗಿರತ್ತೆ. ಹಾಗಾಗಿ ಸೋಡಾ ಮತ್ತೆ ವಿನೆಗರ್ ಅನ್ನು ಮಿಕ್ಸ್ ಮಾಡಿ ಸ್ಕ್ರಬರ್ ನಿಂದ ಟೈಲ್ಸ್ ಮೇಲೆ ಹಚ್ಚಿ ಸ್ವಚ್ಛ ಮಾಡುವುದರಿಂದ ಕಲೆಗಳು ಹೋಗತ್ತೆ. ನಂತರ ಒಂದು ಬಟ್ಟೆಯಿಂದ ಒರೆಸಬೇಕು. ಇನ್ನು ಅಡುಗೆಮನೆಯ ಸಿಂಕ್ ಅಲ್ಲಿ ಕೆಟ್ಟ ವಾಸನೆ ಅಥವಾ ಏನಾದರೂ ಕಟ್ಟಿ ನೀರು ಸರಿಯಾಗಿ ಹೋಗ್ತಾ ಇರಲ್ಲ. ಆಗ ಅದಕ್ಕೆ ಸಿಂಕ್ ಅಲ್ಲಿ ಒಂದು ಸ್ಪೂನ್ ಉಪ್ಪು, ಒಂದು ಸ್ಪೂನ್ ಅಡುಗೆ ಸೋಡಾ ಹಾಗೂ ಕಾಲು ಕಪ್ ಅಷ್ಟು ವಿನೆಗರ್ ಅನ್ನು ಹಾಕಬೇಕು ಇದರಿಂದ ಪೈಪ್ ನಲ್ಲಿ ಏನಾದರೂ ಬ್ಲಾಕ್ ಆಗಿದ್ದರೂ ಸಹ ಹೋಗತ್ತೆ. ನಂತರ ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರನ್ನ ಮೇಲಿನಿಂದ ಸುರಿಯಬೇಕು.


ಅಡುಗೆ ಮನೆಯ ಟೈಲ್ಸ್, ಗ್ಯಾಸ್ ಸ್ಟೋವ್, ಮನೆಯ ಕಪಾಟ್ ಇವುಗಳ ಮೇಲೆ ನೊಣಗಳು ಕುಳಿತಿರತ್ತೆ ಇದಕ್ಕೆ ಒಂದು ಬೌಲ್ ಗೆ ಎರಡು ಸ್ಪೂನ್ ವಿನೆಗರ್ ಮತ್ತು ಒಂದು ಸ್ಪೂನ್ ಉಪ್ಪು ಸೇರಿಸಿ ಆ ಲಿಕ್ವಿಡ್ ಅನ್ನು ಈ ಎಲ್ಲಾ ಕಡೆ ಹಚ್ಚುವುದರಿಂದ ಮನೆಯಲ್ಲಿ ಇರುವೆಗಳು ಅಥವಾ ನೊಣಗಳು ಬಂದು ಕೂರಲ್ಲ. ಸಾಮಾನ್ಯವಾಗಿ ಎಲ್ಲರೂ ಒಣ ಮೆಣಸಿನಕಾಯಿಯನ್ನ ತಂದು ಇಟ್ಟುಕೊಂಡಿರುತ್ತೇವೆ. ಆದರೆ ಇದು ಹಾಗೆ ಇಟ್ಟಾಗ ಮೇಲಿಂದ ಸ್ವಲ್ಪ ಬೂಸ್ಟ್ ಬಂದ ಹಾಗೆ ಆಗತ್ತೆ. ಅದಕ್ಕೆ ಮೆಣಸಿನಕಾಯಿಯನ್ನ 4ರಿಂದ 5 ಬಿಸಿಲು ಸರಿಯಾಗಿ ಒಣಗಿಸಿ ನಂತತ ಅಡತ ಚೊಟ್ಟು ತೆಗೆಯದೇ ಹಾಗೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಇದರಿಂದ ಮೆಣಸಿನಕಾಯಿ ಹಾಲು ಆಗಲ್ಲ ಹುಳ ಕೂಡ ಆಗಲ್ಲ.


ಇನ್ನೂ ಸಾಂಬಾರ್ ಪೌಡರ್ ನ ಜಾಸ್ತಿ ಮಾಡಿಟ್ಟುಕೊಂಡರೆ ಬೇಗ ಹಾಳು ಆಗತ್ತೆ ಅನ್ನೋ ಚಿಂತೆ ಇದ್ರೆ, ಒಂದು ಸಾಂಬಾರ್ ಪುಡಿ ಮಾಡಬೇಕಾದರೆ ಅದಕ್ಕೆ ಅರಿಷಿನವನ್ನು ಸೇರಿಸಿಕೊಳ್ಳಬೇಕು ಇಲ್ಲವಾದಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಇಟ್ಟರೆ ಹಾಳಾಗದೆ ಇರತ್ತೆ. ಹೊಸದಾದ ಸ್ಟೀಲ್ ಪಾತ್ರೆಯ ಮೇಕೆ ಸ್ಟಿಕರ್ ಇರತ್ತೆ ಕೆಲವೊಮ್ಮೆ ಅದನ್ನ ಹಾಗೆಯೇ ತೆಗಿಯೋಕೆ ಹೋದ್ರೆ ಸರಿಯಾಗಿ ಕಿತ್ತು ಬರಲ್ಲ ಹಾಗಾಗಿ ಆ ಸ್ಟಿಕರ್ ಮೇಲೆ ಕೋಬ್ವರಿ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆಯನ್ನು ಹಚ್ಚಿ ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಕಿ ಒಂದೆರಡು ನಿಮಿಷ ಕಾಯಿಸಿದರೆ ಸ್ಟಿಕರ್ ಪೂರ್ತಿಯಾಗಿ ಕಿತ್ತು ಬರತ್ತೆ.

ಇನ್ನೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಕಟ್ ಮಾಡಿದಾಗ ಕೈ ವಾಸನೆ ಬರುತ್ತಾ ಇರತ್ತೆ ಆಗ ನಿಂಬೆ ಹಣ್ಣಿನ ರಸವನ್ನು ಕೈ ಗೆ ಎಲ್ಲ ಕಡೆ ಹಚ್ಚಿಕೊಳ್ಳುವುದರಿಂದ ಕೈ ವಾಸನೆ ಹೋಗತ್ತೆ. ಫ್ರಿಡ್ಜ್ ಇಲ್ಲದೆ ಇರುವವರು ಮೊಸರನ್ನು ಹುಳಿ ಬರದ ಹಾಗೆ ಹೇಗೆ ಇಡೋದು ಅಂತ ಚಿಂತೆ ಮಾಡ್ತಾ ಇರ್ತಾರೆ. ಅದಕ್ಕೆ ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರು ಹಾಕಿ ಅದರಲ್ಲಿ ಮೊಸರನ್ನ ಇಟ್ಟು ಮುಚ್ಚಿ ಇಡಬೇಕು. ಇದರಿಂದ ಮೊಸರು ಹುಳಿ ಬರಲ್ಲ. ಗೋಡೆಯ ಮೇಲೆ ಮಕ್ಕಳು ತಬಾ ಗೀಚುವುದು ಬರೆಯುವುದು ಮಾಡುತ್ತಾರೆ ಅದಕ್ಕೆ ನೈಲ್ ಪಾಲಿಶ್ ರಿಮೂವರ್ ಇಂದ ಒರೆಸಿದರೆ ಹೋಗತ್ತೆ.

ಬಟ್ಟೆಯ ಮೇಲೆ ಎಣ್ಣೆ ಕಲೆ ಅಥವಾ ಏನಾದರೂ ಸೊನೆ ತಾಗಿ ಕಲೆ ಆಗಿದ್ದರೆ ಅದಕ್ಕೂ ಕೂಡಾ ನೈಲ್ ಪಾಲಿಶ್ ರಿಮೂವರ್ ಹಾಕಿ ಹಚ್ಚಿ ನಂತರ ಸೋಪ್ ಬಳಸಿ ಬ್ರಶ್ ಮಾಡುವುದರಿಂದ ಹೋಗತ್ತೆ.
ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಉರತ್ತೆ. ನೈಲ್ ಪಾಲಿಶ್ ತಂದು ತುಂಬಾ ದಿನ ಆಗಿದ್ರೆ ಹಾಗೇ ಗಟ್ಟಿ ಆಗತ್ತೆ ಅದಕ್ಕೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಸ್ವಲ್ಪ ಶೇಕ್ ಮಾಡಿದ್ರೆ ಸರಿ ಆಗತ್ತೆ. ಒಮ್ಮೊಮ್ಮೆ ಅಡುಗೆ ಮನೆಯಲ್ಲಿ ಸಿಹಿ ಪದಾರ್ಥಗಳು ಬಿದ್ದು ಇರುವೆ ಬರತ್ತೆ ಆಗ 5/6 ಪುಡಿ ಮಾಡಿದ ಕರ್ಪೂರ, ಒಂದು ಸ್ಪೂನ್ ಅರಿಶಿನ ಹಾಗೂ ಅರ್ಧ ಸ್ಪೂನ್ ಉಪ್ಪು ಮೂರನ್ನೂ ಮಿಕ್ಸ್ ಮಾಡಿ, ಇರುವೆ ಬಂದ ಜಾಗಕ್ಕೆ ಹಾಕಿದ್ರೆ ಇರುವೆ ಹಾಗೂ ಜಿರಳೆಗಳೂ ಸಹ ಹೋಗತ್ತೆ.ತುಂಬಾ ಸುಲಭವಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಈ ರೀತಿಯಾಗಿ ಪೂರ್ತಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.

















































Wednesday, 22 January 2020

ಪ್ರತಿದಿನದ ದಿನಚರಿಗೆ ಆರೋಗ್ಯಕರವಾದ ಅಭ್ಯಾಸಗಳು ಹೀಗಿರಲಿ

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿದೆ. ಇದು ನಮ್ಮ ಹಿರಿಯರ ಅನುಭವದ ಮಾತು. ಆರೋಗ್ಯ ಇಲ್ಲದಿದ್ದರೆ ಜೀವನವೇ ವ್ಯರ್ಥ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಚೆನ್ನಾಗಿರುವ ಆಹಾರವನ್ನು ಸೇವಿಸಿ ಉತ್ತಮವಾದ ದೈಹಿಕ ವ್ಯಾಯಾಮವನ್ನು ಅನುಸರಿಸಿಕೊಂಡು ನಮ್ಮ ದೇಹವನ್ನು ಸುಸ್ಥಿಯಲ್ಲಿಡಬೇಕು.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಾವು ಪ್ರತಿದಿನ ಒಂದು ಅಭ್ಯಾಸಕ್ಕೆ ದಿನಚರಿಗೆ ಹೊಂದಿಕೊಂಡಿರುತ್ತೇವೆ. ಈಗಿನ ಹೈ ಟೆಕ್ ಯುಗದಲ್ಲಿ ಜನರಿಗೆ ಯಾವುದಕ್ಕೂ ಟೈಮ್ ಸಾಕಾಗಲ್ಲ. ಬೆಳಗ್ಗೆ ತಿಂಡಿ ತಿನ್ನೋದಕ್ಕೂ ಸಮಯ ಇರೋದಿಲ್ಲ. ಸಂಜೆ ಆಫೀಸ್ನಿಂದ ಬರೋವಾಗ ಏನಾದ್ರೂ ಜಂಕ್ ಫುಡ್ ತಿನ್ನಬೇಕೂಂತ ಅನ್ಸುತ್ತೆ. ದೇಹಕ್ಕೆ ಸರಿಯಾದ ವ್ಯಾಯಾಮ ಇರಲ್ಲ. ನಮಗೆ ತಿಳಿಯದಂತೆ ನಮ್ಮ ದೇಹವು ರೋಗಗಳ ಗೂಡಾಗಿರುತ್ತದೆ. ಇದು ನಮ್ಮ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಾಗಾಗಿ ನಮ್ಮ ಪ್ರತಿದಿನದ ದಿನಚರಿಯಲ್ಲಿ ಒಂದು ಶಿಸ್ತನ್ನು ಅಳವಡಿಸಿಕೊಂಡರೆ ನಾವು ಹೆಚ್ಚು ಆರೋಗ್ಯವಾಗಿ ಇರಬಹುದು. 


ಈ ಅಭ್ಯಾಸಗಳನ್ನು ಪ್ರತಿದಿನ ನಮ್ಮ ಜೀವನದಲ್ಲಿ ರೂಢಿ ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆ ಅಭ್ಯಾಸಗಳು ಯಾವುದೆಂದು ತಿಳಿಯೋಣ.


1. ಬೆಳಗ್ಗೆ ಬೇಗ ಏಳಿ






ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ. ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ. ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು ವೈದ್ಯರು ಹೇಳುತ್ತಾರೆ.



2. ವ್ಯಾಯಾಮ ಮಾಡಿ







ಪ್ರತಿದಿನ ನಾವು ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ದೈಹಿಕ ಚಟುವಟಿಕೆ ಅತಿ ಅವಶ್ಯಕ. ಬೆಳಗ್ಗಿನ ವೇಗದ ನಡಿಗೆ ಎಲ್ಲ ರೋಗಗಳನ್ನು ಹೊಡೆದೋಡಿಸುತ್ತದೆ.




3. 10 ನಿಮಿಷ ಧ್ಯಾನ ಮಾಡಿ







ಧ್ಯಾನವು ನಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ಮಾನಸಿಕ ಆತಂಕ, ಖಿನ್ನತೆ, ಕೋಪ ಮತ್ತು ಗೊಂದಲವನ್ನು ಹೊಡೆದಟ್ಟಿ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.




4. ನೀರನ್ನು ಕುಡಿಯಿರಿ





ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ದೇಹದ ಒಳಗೆ ಸಂಗ್ರಹವಾಗಿರುವ ಟಾಕ್ಸಿನ್ಸ್ ಹೊರಹಾಕಲ್ಪಡುತ್ತದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಕುಡಿಯಿರಿ.



5. ನಿಮ್ಮ ಗುರಿಗಳ ಬಗ್ಗೆ ವಿಮರ್ಶೆ







ನಿಮ್ಮ ಈ ದಿನದ ಗುರಿಗಳೇನು? ಅವುಗಳನ್ನು ತಲುಪಲು ಏನೇನು ಸಿದ್ಧತೆಗಳು ಬೇಕು? ಎಂದು ಸ್ವಲ್ಪ ವಿಮರ್ಶೆ ಮಾಡಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ಇದರಿಂದ ನೀವು ಸುಲಭವಾಗಿ ನಿಮ್ಮ ಗುರಿಯನ್ನು ತಲುಪಲು ಸಾಧ್ಯ.



6. ನಗು






ನೀವು ನಗುವಿನ ಪ್ರಾಮುಖ್ಯತೆ ಬಗ್ಗೆ ಕೇಳಿರಬಹುದು ಅಲ್ವಾ. ನಗುವಿನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ನಗು ನಮ್ಮನ್ನು ಖುಷಿಯಾಗಿ ಇಡುವುದಲ್ಲದೆ ನಮ್ಮನ್ನು ನೋಡುವವರನ್ನು ನಮ್ಮಡೆಗೆ ಆಕರ್ಷಿಸುತ್ತದೆ. ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.



7.  ಒಳ್ಳೆಯ ಆಹಾರವನ್ನು ಸೇವಿಸಿ






ನಮ್ಮ ಬಾಯಿಗೆ ಹೆಚ್ಚು ರುಚಿಯಾಗಿರುವುದು ದೇಹಕ್ಕೆ ಹೆಚ್ಚು ಕಹಿ. ಆದರಿಂದ ನೀವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಅದರ ಪೌಷ್ಠಿಕಾಂಶಗಳ ಬಗ್ಗೆ ಮತ್ತು ಅದರಿಂದ ನಿಮಗೆ ಉಪಯುಕ್ತವಾಗುವ ಅಂಶಗಳ ಬಗ್ಗೆ ಮೊದಲು ಗಮನಹರಿಸಿ. ನಿಮಗೆ ಆರೋಗ್ಯವಾದ ಮತ್ತು ಸದೃಢವಾದ ದೇಹ ಇದ್ದಲ್ಲಿ, ನೀವು ಸೇವಿಸುವ ಪ್ರತಿಯೊಂದು ತುತ್ತಿನ ಆಹಾರವೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳು, ಹಸಿರು ಸೊಪ್ಪುಗಳು ಹೇರಳವಾಗಿರಲಿ.




8. ಒಳ್ಳೆಯ ನಿದ್ರೆ





ಒಳ್ಳೆಯ ಆರೋಗ್ಯವನ್ನು ಪಡೆಯಲು ನಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿಯನ್ನು ಕೊಡುವ ನಿದ್ರೆ ತುಂಬಾ ಅಗತ್ಯ. ಆರೋಗ್ಯವಂತ ವ್ಯಕ್ತಿಗೆ ಸರಾಸರಿ 8 ಗಂಟೆಗಳ ನಿದ್ರೆ ಅತಿ ಅಗತ್ಯ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಒಳ್ಳೆಯ ಆರೋಗ್ಯಕರ ಅಭ್ಯಾಸವಾಗಿದೆ.


(ಸಂಗ್ರಹ)

ಹೊಳೆಯುವ ತ್ವಚೆಗಾಗಿ ಆರೋಗ್ಯಕರ ಸಲಹೆಗಳು.

ಬೆಳ್ಳಗಿನ ಹೊಳೆಯುವ ತ್ವಚೆ ಯಾರಿಗೆ ತಾನೇ ಬೇಡ? ಅದರಲ್ಲೂ ಹುಡುಗಿಯರು ತಾವು ಬೆಳ್ಳಗೆ ಸುಂದರವಾಗಿ ಕಾಣಲು ಹಲವಾರು ಚಿಕಿತ್ಸೆಗೆ ಮೊರೆ ಹೋಗಿ ಕೊನೆಗೆ ಇದ್ದ ಬದ್ದ ಸೌಂದರ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈಗಿನ ಆಧುನಿಕ ಫ್ಯಾಶನ್ ಯುಗದಲ್ಲಿ ಸುಂದರವಾದ ಹೊಳೆಯುವ ತ್ವಚೆ ತುಂಬಾನೇ ಅಗತ್ಯ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳಿರುವ ಕ್ರೀಮ್ ಗಳನ್ನು ಹಚ್ಚಬಾರದು. ಇದು ನಿಮ್ಮ ಚರ್ಮಕ್ಕೆ ಹಾನಿಯನ್ನು ಉಂಟು ಮಾಡಬಹುದು.  ಅದರ ಬದಲು ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಿ.


ಕಡಿಮೆ ಖರ್ಚಿನಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆ? ಹಾಗಾದ್ರೆ ಇಲ್ಲಿದೆ ನೋಡಿ ಆರೋಗ್ಯಕರ ಮನೆಮದ್ದುಗಳು.


1. ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಅರ್ಧ ತುಂಡು ನಿಂಬೆ ಹಣ್ಣನ್ನು ನಿಮ್ಮ ಮುಖದ ಮೇಲೆ ನಯವಾಗಿ ತಿಕ್ಕಿ ಆಮೇಲೆ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯಿರಿ. ನಿಂಬೆಯು ಉತ್ತಮ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯು ಬೆಳ್ಳಗೆ ಸುಂದರವಾಗಿ ಕಾಣುತ್ತದೆ.









2. ಆಲೂಗಡ್ಡೆಯ ಸಿಪ್ಪೆ ಸುಲಿದು ಅದರ ರಸವನ್ನು ಹಿಂಡಿ ತೆಗೆಯಿರಿ. ನಂತರ ಈ ರಸವನ್ನು ಮುಖಕ್ಕೆ ಮೃದುವಾಗಿ ತಿಕ್ಕಿ ಮಸಾಜ್ ಮಾಡಿ. ಇದು ಒಳ್ಳೆಯ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಚರ್ಮದ ಗೆರೆಗಳು ಹಾಗೂ ಸುಕ್ಕುಗಳು ನಿವಾರಣೆಯಾಗಿ ಮುಖವು ಆರೋಗ್ಯಯುತವಾಗಿ ಹೊಳೆಯುತ್ತದೆ.








3. ಟೊಮ್ಯಾಟೋ ತಿರುಳನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆಯಿರಿ. ಇದರಿಂದ ಸುಂದರವಾದ ಗುಲಾಬಿ ವರ್ಣದ ತ್ವಚೆ ನಿಮ್ಮದಾಗುವುದು. ಇದನ್ನು ಪ್ರತಿದಿನವೂ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.










4. ನಿಂಬೆ ಹಣ್ಣಿನ ರಸ ಹಾಗೂ ಜೇನು ಇದನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಲಸಿ ನಂತರ ನಿಮ್ಮ ಮುಖಕ್ಕೆ ಹಚ್ಚಿ. ಇದರಿಂದ ಕೆಲವೇ ವಾರಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಒಂದು ತಿಂಗಳಿನವರೆಗೆ ಈ ವಿಧಾನವನ್ನು ಪುನರಾವರ್ತಿಸಿ.








5. ಮುಳ್ಳುಸೌತೆ ರಸವನ್ನು ನಿಂಬೆ ರಸದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ. ಮುಖ್ಯವಾಗಿ ಎಣ್ಣೆ ತ್ವಚೆ ಉಳ್ಳವರು ಇದನ್ನು ಹಚ್ಚುವುದರಿಂದ ಸುಂದರವಾದ ಹೊಳೆಯುವ ತ್ವಚೆ ಪಡೆಯಬಹುದು.










6. ಮೊಸರನ್ನು ಪ್ರತಿದಿನವೂ ಮುಖಕ್ಕೆ ಹಚ್ಚುವುದರಿಂದ ಬೆಳ್ಳನೆಯ ತ್ವಚೆ ನಿಮ್ಮದಾಗುತ್ತದೆ. ಮೊಸರಿನಲ್ಲಿ ಲಾಕ್ಟಿಕ್ ಆಸಿಡ್ ಸಮೃದ್ಧವಾಗಿದ್ದು ಇದು ಚರ್ಮದ ಬಣ್ಣವನ್ನು ತಿಳಿಯಾಗಿಸಿ ಬೆಳ್ಳಗಾಗುವಂತೆ ಮಾಡುತ್ತದೆ. ಇದು ಒಳ್ಳೆಯ ಮನೆಮದ್ದು ಕೂಡ ಹೌದು. ತುಂಬಾ ಖರ್ಚಿಲ್ಲದೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.








7. ಎಳನೀರನ್ನು ಮುಖಕ್ಕೆ ಹಚ್ಚುವುದರಿಂದ ನೈಸರ್ಗಿಕವಾದ ಹೊಳೆಯುವ ಗೌರ ತ್ವಚೆಯನ್ನು ಪಡೆಯಬಹುದು.







8. ಎಣ್ಣೆ ತ್ವಚೆಯುಳ್ಳವರು 2 ದೊಡ್ಡ ಚಮಚ ಕಡಲೆಹಿಟ್ಟಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ, ಹಾಲಿನ ಕೆನೆ ಮತ್ತು ಒಂದು ಚಿಟಿಕೆ ಅರಶಿಣವನ್ನು ಹಾಕಿ ಚೆನ್ನಾಗಿ ಕಲೆಸಿ ನಂತರ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆದರೆ ಉತ್ತಮ ಫಲಿತಾಂಶ ಪಡೆಯಬಹುದು.







9. ಒಣ ಚರ್ಮದವರು ಸ್ವಲ್ಪ ಗೋಧಿ ಹಿಟ್ಟಿಗೆ ಮೊಸರು ಮತ್ತು ಅರಶಿಣವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖವು ನುಣುಪಾಗಿ ಬೆಳ್ಳಗಾಗುವುದು.








10. ಅಕ್ಕಿ ಹಿಟ್ಟು ಮತ್ತು ಮೊಸರನ್ನು ಚೆನ್ನಾಗಿ ಕಲೆಸಿ ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ನೈಸರ್ಗಿಕವಾದ ಸ್ಕ್ರಬ್ ಆಗಿದ್ದು ವಾರಕ್ಕೊಮ್ಮೆ ಮಾಡುವುದರಿಂದ ನಿಮ್ಮ ತ್ವಚೆಯ ಬಣ್ಣವು ತಿಳಿಯಾಗುತ್ತದೆ.




ಕೆಲವರು ಮೇಕಪ್ ಮಾಡಿಕೊಂಡರೆ ಮಾತ್ರ ತಾನು ತುಂಬಾ ಪ್ರಕಾಶಮಾನವಾಗಿ ಕಂಡು ಎಲ್ಲರನ್ನೂ ಆಕರ್ಷಿಸಬಹುದೆಂದು ಅಂದುಕೊಂಡಿದ್ದಾರೆ. ಆದರೆ ಇವರು ಕೆಲವು ನಕಲಿ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಕೊಂಡು ಮೋಸ ಹೋಗುತ್ತಿದ್ದಾರೆ. ಆದರೆ ನಾವು ನೀಡುವ ಕೆಲವು ಸಲಹೆಗಳನ್ನು ಒಮ್ಮೆ ಅವಲೋಕಿಸಿ. ಈ ಸರಳ ವಿಧಾನಗಳಿಂದ ನಿಮ್ಮ ವದನದ ಕಾಂತಿಯನ್ನು ಇನ್ನೂ ಹೆಚ್ಚಿಸಿಕೊಳ್ಳಿ. ಸಹಜ ವದನದ ಕಾಂತಿಯನ್ನು ಹೆಚ್ಚಿಸುವ ಮೂಲಕ ಸಹಜ ಸೌಂದರ್ಯ ಹೆಚ್ಚಿಸಲು ನೆರವಾಗುತ್ತದೆ. ಇವು ನಿಜಕ್ಕೂ ಪರಿಣಾಮಕಾರಿ.

(ಸಂಗ್ರಹ)

ಸಕ್ಕರೆ ಎಂಬ ವಿಷ! ಜಾಸ್ತಿ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!!!




ಸಕ್ಕರೆ ಇದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಕ್ಕರೆ ಇಲ್ಲದ ಕಾಫಿ, ಚಹಾವನ್ನು ಊಹಿಸಲು ಅಸಾಧ್ಯ. ಸಕ್ಕರೆ ಹಾಕಿ ಮಾಡಿರುವ ಸಿಹಿತಿಂಡಿಗಳು, ಕೇಕ್, ಚಾಕ್ಲೇಟ್, ಐಸ್ ಕ್ರೀಮ್ ಗಳಂತೂ ಮಕ್ಕಳಿಗೆ ತುಂಬಾನೇ ಇಷ್ಟ. ಇನ್ನು ದೊಡ್ಡವರಿಗೆ ಸಕ್ಕರೆ ಪಾಕದಲ್ಲಿ ಮುಳುಗಿಸಿರುವ ರಸಗುಲ್ಲ, ಗುಲಾಬ್ ಜಾಮೂನ್ ಗಳೆಂದರೆ ಪಂಚಪ್ರಾಣ. ಮದುವೆ ಮುಂಜಿ ಮೊದಲಾದ ಸಭೆ ಸಮಾರಂಭಗಳ ಊಟಗಳಲ್ಲಂತೂ ಸಕ್ಕರೆಯನ್ನು ಬಳಸಿ ಮಾಡಿರುವ ಪಾಯಸ, ಸಿಹಿ ತಿಂಡಿಗಳದ್ದೇ ಗಮ್ಮತ್ತು.

ಸಕ್ಕರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಜಾಸ್ತಿ ಇರುವ ಹೆಚ್ಚಿನ ಆಹಾರ ಪದಾರ್ಥಗಳು ಜನರ ಹೊಟ್ಟೆಯನ್ನು ಸೇರುತ್ತಿವೆ. ಅಗತ್ಯಕ್ಕಿಂತ ಜಾಸ್ತಿಯಾಗಿ ಸಕ್ಕರೆ ಸೇವಿಸುವುದರಿಂದ ಬಹಳಷ್ಟು ರೋಗಗಳಿಗೆ ನಮ್ಮ ದೇಹವು ಆಹ್ವಾನ ಕೊಟ್ಟಂತೆಯೇ.

ಬನ್ನಿ. ಜಾಸ್ತಿ ಸಕ್ಕರೆ ಸೇವಿಸುವುದರಿಂದ ನಮ್ಮ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಗಮನಿಸೋಣ.



1. ಸಕ್ಕರೆ ಸೇವನೆಯಿಂದ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗುತ್ತದೆ





ಇದರಲ್ಲಿ ಕ್ಯಾಲೊರಿಗಳು ಹೆಚ್ಚಾಗಿರುವುದರಿಂದ ನಮ್ಮ ದೇಹದ ವಿವಿಧ ಅಂಗಾಂಗಗಳಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುವಂತೆ ಮಾಡಿ ಬೊಜ್ಜು ಬರಬಹುದು.





2. ಡಯಾಬಿಟಿಸ್






ಸಕ್ಕರೆಯನ್ನು ಜಾಸ್ತಿ ಸೇವಿಸುವವರಲ್ಲಿ ಮಧುಮೇಹ ಅಥವಾ ಡಯಾಬಿಟಿಸ್ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.



3. ಹೃದ್ರೋಗಗಳು ಬರಬಹುದು







ಸಕ್ಕರೆ ಜಾಸ್ತಿ ಸೇವಿಸುವವರಿಗೆ ಡಯಾಬಿಟಿಸ್ ಸಾಧ್ಯತೆ ಹೆಚ್ಚು. ಡಯಾಬಿಟಿಸ್ ಇರುವವರಲ್ಲಿ, ಅದರಲ್ಲೂ ಟೈಪ್ 2 ಡಯಾಬಿಟಿಸ್ ಇರುವವರಲ್ಲಿ, ಹೃದಯದ ಖಾಯಿಲೆಗಳು ಬರುವ ಸಾಧ್ಯತೆ  65%  ಹೆಚ್ಚು ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.




4. ಕೊಲೆಸ್ಟ್ರಾಲ್






ಸಕ್ಕರೆ ಜಾಸ್ತಿ ಸೇವಿಸುವವರ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಗಳಿಗಿಂತ ಕೆಟ್ಟ ಕೊಲೆಸ್ಟ್ರಾಲ್ ಗಳ ಪ್ರಮಾಣ ಜಾಸ್ತಿ ಇರುವುದು ಕೆಲವು ಸಂಶೋಧನೆಗಳಲ್ಲಿ ಕಂಡು ಬಂದಿವೆ. 




5. ಕ್ಯಾನ್ಸರ್






ಡಯಾಬಿಟಿಸ್ ಖಾಯಿಲೆ ಇರುವವರಲ್ಲಿ ಇನ್ಸುಲಿನ್ ಸರಿಯಾಗಿ ಉತ್ಪಾದನೆ ಆಗುವುದಿಲ್ಲ. ಇನ್ಸುಲಿನ್ ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್ ಆಗಿದೆ. ಇದು ಸರಿಯಾಗಿ ಬಿಡುಗಡೆ ಆಗದಿದ್ದಲ್ಲಿ ಜೀವಕೋಶಗಳು ಬೇಕಾಬಿಟ್ಟಿಯಾಗಿ ಬೆಳೆದು ಕ್ಯಾನ್ಸರ್ ಬರುವ ಸಾಧ್ಯತೆಯು ಜಾಸ್ತಿ.




6. ಕಣ್ಣಿನ ಸಮಸ್ಯೆಗಳು









ಡಯಾಬಿಟಿಸ್ ಗೂ ಕಣ್ಣಿನ ಆರೋಗ್ಯಕ್ಕೂ ನೇರ ಸಂಬಂಧ ಇದೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರಲ್ಲಿ ಕಣ್ಣಿನ ಸಮಸ್ಯೆಗಳು ತಲೆದೋರಬಹುದು.




7. ಹಲ್ಲಿನ ಸಮಸ್ಯೆಗಳು





ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ದಂತ ಕುಳಿಗಳ ಸಾಧ್ಯತೆ ಹೆಚ್ಚು. ಆದರೆ ಸಕ್ಕರೆ ಸೇವಿಸಿದಾಗ ಇದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ದಂತ ಕುಳಿಗಳು ಆಗಬಹುದು.

ಚಪಾತಿ ರುಚಿಗೂ ಸೈ ಆರೋಗ್ಯಕ್ಕೂ ಸೈ







ದಕ್ಷಿಣ ಭಾರತದಲ್ಲಿ ಜನರು ಹೆಚ್ಚಾಗಿ ಅನ್ನವನ್ನು ತಮ್ಮ ಪ್ರಮುಖ ದೈನಂದಿನ ಆಹಾರವಾಗಿ ಸೇವಿಸುತ್ತಾರೆ. ಹಾಗೆ ನೋಡಿದರೆ ಉತ್ತರ ಭಾರತದ ಕೆಲವೆಡೆ ಚಪಾತಿಯೇ ಅವರ ಪ್ರಮುಖ ದೈನಂದಿನ ಆಹಾರವಾಗಿದೆ. ಇನ್ನೂ ಡಯೆಟ್ ಮಾಡುವವರಂತೂ ಒಪ್ಪೊತ್ತಿಗೆ ಚಪಾತಿಯನ್ನು ಖಂಡಿತ ಸೇವಿಸುತ್ತಾರೆ ಹೆಚ್ಚಿನ ಸಿನಿಮಾ ತಾರೆಯರು ಕೂಡ ತಮ್ಮ ತೂಕ ಏರದಂತೆ ನೋಡಿಕೊಳ್ಳುವ ಮತ್ತು ಕ್ಯಾಲೊರಿಗಳು ಕಡಿಮೆ ಇರುವ ಚಪಾತಿಗೆ ಮೊರೆ ಹೋಗಿದ್ದಾರೆ.

ಆದರೆ ನಮ್ಮಲ್ಲಿ ಅನೇಕರಿಗೆ ಚಪಾತಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭ ಇನ್ನೂ ಗೊತ್ತಿಲ್ಲ. ಹಲವು ಸಂಶೋಧನೆಗಳ ಪ್ರಕಾರ ಇದು ಅತ್ಯಂತ ಆರೋಗ್ಯಯುತವಾದ ಆಹಾರ ಎಂದು ಧೃಢೀಕರಿಸಲ್ಪಟ್ಟಿದೆ. ನಮ್ಮ ಹೃದಯದ ಆರೋಗ್ಯದ ದೃಷ್ಟಿಯಿಂದ ಇದೊಂದು ಮಹತ್ವಪೂರ್ಣವಾದ ಆಹಾರವೂ ಹೌದು ಏಕೆಂದರೆ ಇದರಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿ ಇವೆ.

ಚಪಾತಿಯ ಸೇವನೆಯಿಂದ ಏನೆಲ್ಲ ಲಾಭಗಳು ಎಂದು ಒಂದೊಂದಾಗಿ ನೋಡೋಣವೇ?




1. ದೈನಂದಿನ ಚಟುವಟಿಕೆಗೆ ಬೇಕಾಗುವಷ್ಟು ಶಕ್ತಿಯನ್ನು ಒದಗಿಸುತ್ತದೆ.





ಚಪಾತಿಯೂ ನಮ್ಮ ದೇಹಕ್ಕೆ ಬೇಕಾಗುವಷ್ಟು ವಿಟಮಿನ್ ಮತ್ತು ಮಿನರಲ್ ಗಳಾದ ಮ್ಯಾಗ್ನೀಸಿಯಮ್, ಫಾಸ್ಫರಸ್, ಪೊಟಾಷಿಯಂ, ಕ್ಯಾಲ್ಶಿಯಮ್ ಮತ್ತು ಐರನ್ ಗಳನ್ನು ಪೂರೈಸುತ್ತದೆ.




2. ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ.






ಇದು ಸುಲಭವಾಗಿ ಜೀರ್ಣವಾಗುವುದರಿಂದ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ.


3. ಚರ್ಮದ ಆರೋಗ್ಯಕ್ಕೂ ಒಳ್ಳೆಯದು






ಇದರಲ್ಲಿರುವ Zinc ಮೊದಲಾದ ಮಿನರಲ್ ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ.



4. ಪ್ರತಿದಿನ ಚಪಾತಿ ಸೇವಿಸುವವರಿಗೆ ಅನಿಮಿಯಾ ಬರುವ ಸಾಧ್ಯತೆ ಕಡಿಮೆ





ನಿಮ್ಮ ರಕ್ತದಲ್ಲಿರುವ ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಇದನ್ನು ನಿಮ್ಮ ದೈನಂದಿನ ಡಯೆಟ್ ನಲ್ಲಿ ಬಳ್ಸೋದು ಹೆಚ್ಚು ಸೂಕ್ತ ಏಕೆಂದರೆ ಇದರಲ್ಲಿ ಕಬ್ಬಿಣ ಅಂಶವು ಹೇರಳವಾಗಿದೆಇದರಿಂದ ಅನಿಮಿಯಾ ಬರದಂತೆ ನೋಡಿಕೊಳ್ಳಬಹುದು.



5. ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿ






ಎಣ್ಣೆಯನ್ನು ಬಳಸದೆ ಮಾಡುವ ಚಪಾತಿಯನ್ನು ಸೇವಿಸುವುದರಿಂದ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬು ಕರಗಿ ಆರೋಗ್ಯಕರ ತೂಕವನ್ನು ಪಡೆಯಬಹುದು. 




6. ಮಲಬದ್ಧತೆಯಿಂದ ಪಾರಾಗಬಹುದು






ಇದರಲ್ಲಿ ದೇಹಕ್ಕೆ ಅಗತ್ಯವಾಗಿರುವ ನಾರಿನ ಅಂಶವು ಹೇರಳವಾಗಿದ್ದು ಇದನ್ನು ಪ್ರತಿದಿನ ಬಳಸಿ ಮಲಬದ್ಧತೆಯಿಂದ ಮುಕ್ತಿ ಹೊಂದಬಹುದು.




7. ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ




ಚಪಾತಿಯಲ್ಲಿ ಇರುವ ನಾರಿನಂಶಗಳು ಮತ್ತು ಸೆಲೆನಿಯಂ ಅಂಶವು ಕೆಲವು ತರಹದ ಕ್ಯಾನ್ಸರ್ ಗಳು ಬರದಾನೆ ನೋಡಿಕೊಳ್ಳುತ್ತವೆ. 

(ಸಂಗ್ರಹ)

ಮೈದಾ ಎಂಬ ಸ್ಲೋ ಪಾಯ್ಸನ್!!!








ಮೈದಾ.. ಇದು ಯಾರಿಗೆ ತಾನೇ ಗೊತ್ತಿಲ್ಲ. ಗೃಹಿಣಿಯರು ತಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಇದು ಬೇರೆ ಎಲ್ಲ ಆಹಾರ ಉತ್ಪನ್ನಗಳೊಂದಿಗೆ ಸುಲಭವಾಗಿ ಬೆರೆತು ಒಳ್ಳೆಯ ರುಚಿ, ಒಳ್ಳೆಯ ವಿನ್ಯಾಸವನ್ನು ನೀಡುವುದರಿಂದ ಇದನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಸಿಹಿತಿಂಡಿಗಳು, ಕೇಕ್, ಬ್ರೆಡ್, ಬನ್, ಲಚ್ಚ ಪರೋಟ ಮೊದಲಾದ ಕೆಲವು ತಿನಿಸುಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. 90%ದಷ್ಟು ಬೇಕರಿ ತಿನಿಸುಗಳು ಮೈದಾದಿಂದಲೇ ತಯಾರಿಸಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸುಂದರವಾದ ಬಿಳಿ ಹಿಟ್ಟು ಇಲ್ಲದೆ ಬದುಕುವುದು ಸಾಧ್ಯವಿಲ್ಲ ಎಂಬಂತಾಗಿದೆ. 

ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟು ಇವೆರಡರಲ್ಲಿ ಯಾವುದು ತುಂಬಾ ರುಚಿಯಾದದ್ದು? ಮೈದಾ ಅಲ್ವಾ. ಆದರೆ ವಾಸ್ತವದಲ್ಲಿ ಮೈದಾ ಕೂಡ ಗೋಧಿ ಹಿಟ್ಟೇ. ಮೈದಾ ಹಿಟ್ಟು ನೋಡೋಕೆ ನಯವಾದ ಬೆಳ್ಳಗಿನ ಹಿಟ್ಟು. ಇದನ್ನು ಅಪರೂಪಕ್ಕೊಮ್ಮೆ ತಿಂದರೆ ದೇಹಕ್ಕೆ ಅಷ್ಟೊಂದು ಹಾನಿ ಆಗುವುದಿಲ್ಲ. ಪ್ರತಿನಿತ್ಯ ಬಳಸಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ಮೈದಾವನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಏನಾಗಬಹುದು? ಇದನ್ನು ಬಳಸಿದ ಕೂಡಲೇ ಇದು ದೇಹದ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದರೆ ಇದನ್ನು ದೀರ್ಘಾವಧಿಯ ತನಕ ಬಳಸಿದರೆ ಮಾತ್ರ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಬೀರುವ ಫಲಿತಾಂಶ ಮಾತ್ರ ತುಂಬಾ ನಿಧಾನವಾಗಿ ಗೋಚರಕ್ಕೆ ಬರುತ್ತದೆ.

ಮೈದಾ ಎಂದರೇನು? ಮೈದಾವು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು ಆಗಿದ್ದು ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಬರೀ ಇಷ್ಟೇ ಅಲ್ಲ, ಇದನ್ನು Benzoic Peroxide ಎಂಬ ರಾಸಾಯನಿಕದಿಂದ ಬ್ಲೀಚ್ ಮಾಡುವುದರಿಂದ  ಶುಭ್ರ ಬಿಳಿ ಬಣ್ಣ ಹಾಗೂ ನಯವಾದ ವಿನ್ಯಾಸವನ್ನು ಪಡೆಯುತ್ತದೆ.  Benzoic Peroxideನ್ನು ಚೀನಾ ಮತ್ತು ಯೂರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.



1. ಸಕ್ಕರೆ ಖಾಯಿಲೆ








ಇದರಲ್ಲಿ 100% ಕಾರ್ಬೊಹೈಡ್ರೇಟ್ ಅಂಶವಿದ್ದು ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.




2.ದೇಹದ ತೂಕದಲ್ಲಿ ಹೆಚ್ಚಳ








ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಿ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ.



3. ಸೋಮಾರಿತನ ಹೆಚ್ಚುತ್ತದೆ







ಮೈದಾದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ.




4. ಕೊಲೆಸ್ಟ್ರಾಲ್ ಹೆಚ್ಚುತ್ತದೆ









ನಮ್ಮ ಆಹಾರದಲ್ಲಿ ಇರುವ ನಾರಿನಂಶವು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.




5. ಹಸಿವು ಜಾಸ್ತಿಯಾಗುತ್ತದೆ









ಮೈದಾದ ಅತಿ ಕೆಟ್ಟ ಗುಣ ಏನೆಂದರೆ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಥಟ್ಟನೆ ಲಭ್ಯವಾಗಿ ಮತ್ತೆ ಅಷ್ಟೇ ಬೇಗ ಖಾಲಿಯಾಗುವುದು. ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ.





6. ಮಲಬದ್ಧತೆ ಜಾಸ್ತಿಯಾಗುತ್ತದೆ











ನಾರು ಪದಾರ್ಥಗಳು ಮಲವಿಸರ್ಜನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಆದರೆ ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು



7. ಸಿಟ್ಟು, ಅಸಹನೆ ಜಾಸ್ತಿಯಾಗುತ್ತದೆ










ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ.


(ಸಂಗ್ರಹ)

ಬಿಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು

ನಿಮಗೆಲ್ಲರಿಗೂ ತಿಳಿದಿರುವಂತೆ ನೀರು ಭೂಮಿಯಲ್ಲಿನ ಎಲ್ಲ ಜೀವಿಗಳಿಗೂ ಮೂಲ ಆಧಾರ. ಅದರಲ್ಲೂ ಮನುಷ್ಯನಿಗೆ ನೀರು ಅತ್ಯಗತ್ಯ. ವೈದ್ಯರ ಪ್ರಕಾರ ಒಂದು ದಿನಕ್ಕೆ ಕನಿಷ್ಟ 8 ಗ್ಲಾಸ್ ನೀರನ್ನು ಕುಡಿಯಲೇಬೇಕು. ಆದರೆ ನಮ್ಮಲ್ಲಿ ತುಂಬಾ ಜನರಿಗೆ ಬೆಚ್ಚಗಿನ ನೀರು ಅಥವಾ ಬಿಸಿ ನೀರು ತಣ್ಣಗಿನ ನೀರಿಗಿಂತ ಒಳ್ಳೆಯದು ಅಂತ ತಿಳಿದಿಲ್ಲ ಅಲ್ವಾ.



ಬಿಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನೆಂಬುದನ್ನು ನೋಡೋಣ


1. ದೇಹದ ತೂಕವನ್ನು ನಿಯಂತ್ರಿಸುತ್ತದೆ.




ಬಿಸಿ ನೀರನ್ನು ಕುಡಿಯುದರಿಂದ ನಿಮ್ಮ ದೇಹದ ಮೆಟಾಬಾಲಿಸಂ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.



2. ಮೂಗಿನ ಹಾಗೂ ಗಂಟಲಿನ ಆರೋಗ್ಯವನ್ನು ಕಾಪಾಡುತ್ತದೆ.




ಶೀತ, ಕೆಮ್ಮು, ಕಫ ಮುಂತಾದ ಸಮಸ್ಯೆಗೆ ಬಿಸಿ ನೀರು ಮನೆಮದ್ದು. ಇದನ್ನು ಕುಡಿಯುದರಿಂದ ಗಂಟಲಿನ ಕೆರೆತ ಕಡಿಮೆಯಾಗುತ್ತದೆ. ಕಟ್ಟಿದ ಮೂಗಿನಿಂದ ಬಲು ಬೇಗ ಉಪಶಮನ ನೀಡುತ್ತದೆ.



3.ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕುತ್ತದೆ. 




ದೇಹದ ವಿಷ ಪದಾರ್ಥಗಳನ್ನು ಹೊರ ಹಾಕುವಲ್ಲಿ ಬಿಸಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಬಿಸಿಯಾದ ನೀರನ್ನು ಕುಡಿದಾಗ ನಮ್ಮ ದೇಹದ ಉಷ್ಣತೆ ಜಾಸ್ತಿಯಾಗಿ ಆ ಮೂಲಕ ನಮ್ಮ ದೇಹದಲ್ಲಿರುವ ವಿಷ ಪದಾರ್ಥಗಳು ಬೆವರಿನ ರೂಪದಲ್ಲಿ ಹೊರ ಹಾಕಲ್ಪಡುತ್ತದೆ.



4. ಅಕಾಲಿಕ ಮುಪ್ಪನ್ನು ತಡೆಯುತ್ತದೆ.




ದೇಹದಲ್ಲಿರುವ ವಿಷಕಾರಕ ವಸ್ತುಗಳು ನಮ್ಮ ತ್ವಚೆಯು ಬೇಗ ಮುಪ್ಪಾದಂತೆ ಕಾಣುವ ಹಾಗೆ ಮಾಡುತ್ತವೆ. ಬಿಸಿ ನೀರನ್ನು ಕುಡಿಯುವುದರಿಂದ ಚರ್ಮದ ಜೀವಕೋಶಗಳ ಸ್ಥಿತಿಸ್ಥಾಪಕತ್ವ ಗುಣ ಜಾಸ್ತಿಯಾಗುತ್ತದೆ. ಇದು ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.



5. ಮೊಡವೆಗಳಿಂದ ಮುಕ್ತಿ




ಬಿಸಿ ನೀರು ನಮ್ಮ ದೇಹವನ್ನು ಶುದ್ಧೀಕರಿಸುವ ಮೂಲಕ ಮೊಡವೆಗೆ ಕಾರಣವಾದ ವಿಷ ಪದಾರ್ಥಗಳನ್ನು ಹೊರ ಹಾಕುತ್ತದೆ.



6. ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.


ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಕೂದಲಿನ ಬುಡಕ್ಕೆ ಒಳ್ಳೆಯ ರಕ್ತ ಸಂಚಲನೆಯಾಗಿ ನಿಮ್ಮ ಕೂದಲು ನೈಸರ್ಗಿಕವಾಗಿ ಹೂಳೆಯುವಂತೆ ಮಾಡುತ್ತದೆ. ತಲೆ ಹೊಟ್ಟನ್ನು ನಿವಾರಿಸುತ್ತದೆ ಮತ್ತು ನಿಮ್ಮ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.



7. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.



ಬಿಸಿ ನೀರನ್ನು ಸೇವಿಸುವುದರಿಂದ ಪಚನ ಶಕ್ತಿ ಉತ್ತಮಗೊಳ್ಳುವುದರ ಮೂಲಕ ಕರುಳಿನ ಆರೋಗ್ಯ ಕಾಪಾಡುತ್ತದೆ.

(ಸಂಗ್ರಹ)

ಪಪ್ಪಾಯಿಯ ಪ್ರಯೋಜನಗಳು ನಿಮಗೆ ತಿಳಿದಿದೆಯಾ?

ವರ್ಷಪೂರ್ತಿ ನಮಗೆ ಸಿಗುವ ಹಣ್ಣು ಪಪ್ಪಾಯಿ ಒಂದೇ. ಇದು ತುಂಬಾ ಸಿಹಿಯಾದ ರುಚಿಯನ್ನು ಹೊಂದಿದ್ದು ಅತ್ಯದ್ಭುತ ಔಷದೀಯ ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ಚರ್ಮ, ಕೂದಲುಗಳ ಆರೋಗ್ಯಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಇವೆ. ಈ ಹಣ್ಣಿನ ತಿರುಳನ್ನು ಅನೇಕ ಸೌಂದರ್ಯ ವರ್ಧಕ ಕ್ರೀಮ್ ಗಳಲ್ಲಿ ಹಾಗೂ ಶಾಂಪೂಗಳಲ್ಲಿ ಬಳಸಲಾಗುತ್ತಿದೆ. ಇದು ಸೌಂದರ್ಯ ವರ್ಧಕ ಹಾಗೂ ಆರೋಗ್ಯ ವರ್ಧಕ  ಹಣ್ಣು ಕೂಡ ಹೌದು.  

ಮೊದಲನೇಯದಾಗಿ ಪಪ್ಪಾಯದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಸಿಯಂ ಸಮೃದ್ಧವಾಗಿದೆ. ಪಾಲಿಕ್ ಆಮ್ಲದ ರೂಪದಲ್ಲಿ ವಿಟಮಿನ್ ಬಿ ಇದರಲ್ಲಿದೆ. ವಿಟಮಿನ್ ಬಿ-6, ವಿಟಮಿನ್ ಬಿ-1 ಮತ್ತು ರಿಬೋಫ್ಲಾವಿನ್ ಇದರಲ್ಲಿದೆ. ಈ ವಿಟಮಿನ್ ಮತ್ತು ಮಿನರಲ್ ಗಳಿಂದ ಪಪ್ಪಾಯ ಒಂದು ಅದ್ಭುತ ಆಹಾರ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ನಿಯಂತ್ರಿಸುತ್ತದೆ.


1. ಈ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ಹೋಗಲಾಡಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. 









2. ಈ ಹಣ್ಣಿನಲ್ಲಿ ನೀರಿನಂಶ ಅಧಿಕವಾಗಿ ಇರುವುದರಿಂದ ಇದು ಚರ್ಮವನ್ನು ತೇವಭರಿತವಾಗಿರಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.








3. ಇದೊಂದು ಅತ್ಯದ್ಭುತವಾದ ಹಣ್ಣು ಆಗಿದ್ದು ವಿಟಮಿನ್ ಮತ್ತು ಮಿನರಲ್ ಗಳಿಂದ ಸಮೃದ್ದವಾಗಿದೆ. ಈ ಹಣ್ಣು ಉಳಿದ ಹಣ್ಣುಗಳಿಗಿಂತ ಕಡಿಮೆ ದರದಲ್ಲಿ ಸಿಗುವುದರಿಂದ ಸಾಮಾನ್ಯ ಜನರು ಇದನ್ನು ಯಥೇಚ್ಚವಾಗಿ ಬಳಸಬಹುದಾಗಿದೆ.








4. ಪಪ್ಪಾಯಿ ಹಣ್ಣನ್ನು ಚೆನ್ನಾಗಿ ರುಬ್ಬಿ ಅದನ್ನು ಮುಖಕ್ಕೆ ಹಚ್ಚಿ . 25 ನಿಮಿಷದ ನಂತರ ಮುಖವನ್ನು ತೊಳೆಯುವುದರಿಂದ ಮೊಡವೆಗಳು ಮಾಯವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.







5. ಈ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನುಣುಪಾದ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುವುದು.







6. ಈ ಹಣ್ಣಿನ ತಿರುಳನ್ನು ಮುಖಕ್ಕೆ ಮಾತ್ರವಲ್ಲದೆ ಕಾಲುಗಳಿಗೂ ಬಳಸಬಹುದಾಗಿದೆ. ಇದರ ತಿರುಳನ್ನು ಕಾಲುಗಳಿಗೆ ಹಚ್ಚುವುದರಿಂದ ಕಾಲುಗಳು ಬೆಳ್ಳಗಾಗುವುದು.







7. ಇದು ಮುಪ್ಪಿನ ಲಕ್ಷಣಗಳನ್ನು ತೊಡೆದು ಹಾಕುತ್ತದೆ. 








8. ಪಪ್ಪಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಕೂದಲು ಉದುರುವುದನ್ನು ತಡೆಗಟ್ಟಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.







9. ಇದು ತಲೆಹೊಟ್ಟು ಆಗದಂತೆ ತಡೆಗಟ್ಟುತ್ತದೆ.







10. ಇದು ಕಣ್ಣಿನ ದೃಸ್ಟಿಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳು ನಿಮ್ಮಿಂದ ದೂರಾಗುತ್ತವೆ.








11.  ಕೊಲೆಸ್ಟ್ರಾಲ್ ಅನ್ನು ಇಳಿಸುತ್ತದೆ.









12. ಅತಿಯಾದ ತೂಕವನ್ನು ಹೊಂದಿರುವವರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯವನ್ನು ಸೇರಿಸುವುದು ಅತ್ಯವಶ್ಯಕ. ಕ್ಯಾಲೋರಿ ಕಡಿಮೆ ಇರುವ ಈ ಹಣ್ಣು ನಿಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ತೂಕ ಇಳಿಕೆಯಾಗುವಂತೆ ಮಾಡುತ್ತದೆ.







13. ನಿಮ್ಮನ್ನು ರೋಗಿಯನ್ನಾಗಿ ಮಾಡುವ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಪಪ್ಪಾಯ ಒದಗಿಸುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.







14. 
ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು.








15. ಮುಟ್ಟಿನ ನೋವು ಅನುಭವಿಸುವ ಹೆಂಗಳೆಯರು ತಿನ್ನಲೇಬೇಕಾದ ಹಣ್ಣಾಗಿದೆ ಪಪ್ಪಾಯ. ಇದರಲ್ಲಿರುವ ಪೆಪೇನ್ ಅಂಶ ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ.









16. ಪಪ್ಪಾಯದಲ್ಲಿರುವ ಉತ್ಕರ್ಷಣ ನಿರೋಧಿ ಅಂಶ, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಪಪ್ಪಾಯವು ಕರುಳಿನ ಮತ್ತು ಜನನೇಂದ್ರಿಯಾದ ಕ್ಯಾನ್ಸರ್ ಅನ್ನು ತಡೆಗಟ್ಟಿರುವ ನಿದರ್ಶನಗಳು ನಮ್ಮ ಕಣ್ಣಮುಂದಿದೆ.







17. ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.






(ಸಂಗ್ರಹ)