Tuesday, 17 December 2019

ನೆಗಡಿ ಕೆಮ್ಮು ಕಫದಂತಹ ಸಮಸ್ಯೆಗಳಿಗೆ ಕ್ಷಣದಲ್ಲೇ ಪರಿಹಾರ ನೀಡುವ ಮನೆಮದ್ದು

ಇನ್ನೇನು ಚಳಿಗಾಲ ಶುರುವಾಗಿದೆ ಚಳಿಗಾಲ ಎಂದರೆ ರೋಗಗಳು ಬರುವುದು ಸರ್ವೇಸಾಮಾನ್ಯ, ಅದರಲ್ಲೂ ಶೀತ ಕೆಮ್ಮು ಕಫ ಗಂಟಲ ನೋವು ಇಂತಹ ಶೀತಕ್ಕೆ ಸಂಬಂದಿಸಿದ ಖಾಯಿಲೆಗಳು ನಮ್ಮನ್ನ ಬಹಳಷ್ಟು ಕಾಡುತ್ತವೆ. ಇಂತಹ ಸಮಸ್ಯೆಗಳಿಗೆ ಎಷ್ಟೇ ಔಷಧಿಗಳನ್ನ ಹಾಗೂ ಮಾತ್ರೆಗಳನ್ನ ತೆಗೆದುಕೊಂಡರು ಕಡಿಮೆಯಾಗುವ ಯಾವುದೇ ಲಕ್ಷಣಗಳು ಸಹ ಕಾಣುವುದಿಲ್ಲ. ಆದರೆ ನಾನು ಇಂದು ನಿಮಗೆ ತಿಳಿಸಿಕೊಡುವ ಮನೆ ಮದ್ದು ಉಪಯೋಗಿಸಿದರೆ ನಿಮ್ಮ ಶೀತದ ಹಲವು ಸಮಸ್ಯೆಗಳು ಕೆಲವು ನಿಮಿಷಗಳಲ್ಲಿಯೇ ಕಡಿಮೆಯಾಗುತ್ತವೆ. ಹಾಗಾದರೆ ಬನ್ನಿ ಮನೆ ಮದ್ದು ತಯಾರಿಸುವ ವಿಧಾನವನ್ನು ತಿಳಿಯೋಣ

ಬೇಕಾಗುವ ಸಾಮಗ್ರಿಗಳು
ಶುಂಠಿ ಒಂದಿಂಚು ಬೆಲ್ಲ ಸ್ವಲ್ಪ ಓಂ ಕಾಳು ಅರ್ಧ ಚಮಚ
ಅರಿಶಿನ ಚಿಟಿಕೆ ಬಾದಾಮಿ ೫/೬ ಕಪ್ಪು ಉಪ್ಪು ಸ್ವಲ್ಪ

ತಯಾರಿಸುವ ವಿಧಾನ : ಮೊದಲು ನೀವು ಶುಂಠಿಯನ್ನ ಚನ್ನಾಗಿ ತುರಿದು ಅದರ ರಸವನ್ನ ತೆಗೆದಿಟ್ಟುಕೊಳ್ಳಿ ನಂತರ ಬಾದಾಮಿಯನ್ನು ಸಹ ತುರೇಮಣಿಯ ಸಹದಿಂದ ತುರಿದಿಟ್ಟುಕೊಳ್ಳಿ. ಇದಾದ ಬಳಿಕ ಒಂದು ಬಾಣಲೆಯನ್ನ ಒಲೆ ಮೇಲಿಟ್ಟು ಉರಿಯನ್ನ ಸಣ್ಣಗೆ ಇಡೀ. ಬಾಣಲೆಗೆ ತುರಿದ ಶುಂಠಿಯ ರಸ ಹಾಗೂ ಬಾದಾಮಿಯ ಪುಡಿಯನ್ನ ಹಾಕಿ ಅದಕ್ಕೆ ಬೆಲ್ಲವನ್ನು ಸಹ ಸೇರಿಸಿ ಸ್ವಲ್ಪ ಕುದಿ ಬಂದ ಬಳಿಕ ಓಂ ಕಾಳು ಕಪ್ಪು ಉಪ್ಪು ಹಾಗೂ ಅರಿಶಿಣವನ್ನ ಹಾಕಿ ಚನ್ನಾಗಿ ಕುದಿಸಿ ಒಲೆಯನ್ನ ಆರಿಸಿ ಒಂದು ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಿ.

ಇದನ್ನ ಚಿಕ್ಕ ಮಕ್ಕಳಿಗಾದರೆ ಬೆಳಗ್ಗೆ ಹಾಗೂ ಸಂಜೆ ಅರ್ಧ ಚಮಚದಷ್ಟು ಕೊಡಿ, ದೊಡ್ಡವರಾದರೆ ಒಂದು ಚಮಚದಂತೆ ದಿನಕ್ಕೆರಡು ಬರಿ ಕುಡಿಯಿರಿ ಹೀಗೆ ಕೇವಲ ಎರಡು ದಿನಗಳವರೆಗೆ ಮಾಡಿದರೆ ಸಾಕು ನಿಮ್ಮ ಶೀತದ ತೊಂದರೆಗಳು ನಿಚಾರಣೆಯಾಗುತ್ತವೆ. ಇದನ್ನ ಮೊದಲ ಬಾರಿ ಕುಡಿದಾಗೆಲೆ ನಿಮಗೆ ವ್ಯತ್ಯಾಸ ಕಾಣುತ್ತದೆ. ಒಮ್ಮೆ ತಯಾರಿಸಿದ್ದನ್ನು ಒಂದು ವಾರಗಳವರೆಗೆ ಶೇಖರಿಸಿಡಬಹುದು. ನಿಮಗೆ ಈ ಮನೆಮದ್ದು ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಧನ್ಯವಾದಗಳು.

ಮಲಬದ್ಧತೆ ನಿವಾರಿಸುವ ಜೊತೆಗೆ ವೃದ್ದಾಪ್ಯದಲ್ಲಿನ ತೊಂದರೆಗಳನ್ನು ದೂರ ಮಾಡುವ ಮೊಸರು.!

ಭೂಲೋಕದ ಅಮೃತ ಮಜ್ಜಿಗೆ ಮೊಸರು ತುಪ್ಪ ಇದೆಲ್ಲವೂ ಕೂಡ ಮನುಷ್ಯ ತನ್ನ ಆಹಾರ ಶೈಲಿಯಲ್ಲಿ ಬಳಕೆ ಮಾಡಿಕೊಳ್ಳುವ ವಿಶೇಷ ಆಹಾರ ಪದ್ದತಿಗಳು. ನಾವುಗಳು ಪ್ರತಿದಿನ ಆಹಾರದಲ್ಲಿ ಮೊಸರನ್ನ ಸೇವಿಸುವುದರಿಂದ ಹಲವು ಲಾಭಗಳನ್ನ ಪಡೆದುಕೊಳ್ಳಬಹುದು. ಮೊಸರು ಹಲವು ಆರೋಗ್ಯಕಾರಿ ಲಾಭಗಳನ್ನ ಹೊಂದಿದೆ ಹಾಗಾದರೆ ಬನ್ನಿ ಇಂದು ನಾವು ಮೊಸರನ್ನ ಸೇವಿಸುವುದರಿಂದಾಗುವ ಲಾಭಗಳನ್ನ ತಿಳಿಯೋಣ. ಮೊಸರು ಯಾವೆಲ್ಲ ರೋಗಗಳನ್ನು ನಿಯಂತ್ರಿಸುತ್ತದೆ ಹಾಗು ಇದರಿಂದ ದೇಹಕ್ಕೆ ಎಷ್ಟೆಲ್ಲ ಲಾಭಗಳಿವೆ ಅನ್ನೋದಾದರೆ, ಒಂದು ಲೋಟ ಮೊಸರು ಜೊತೆ ಸ್ವಲ್ಪ ಕರಿಮೆಣಸಿನ ಪುಡಿ ಅನ್ನು ಬೆರೆಸಿ ಸೇವನೆ ಮಾಡುವುದರಿಂದ ಇದು ಮಲಬದ್ಧತೆಯನ್ನು ದೂರಮಾಡುತ್ತದೆ ಮತ್ತು ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿನ ಅಲ್ಸರ್ ಸಮಸ್ಯೆ ಮಾಯವಾಗುತ್ತದೆ. ಅದು ಹೇಗೆ ಅನ್ನೋದಾದರೆ ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿ ಇನ್ಫಕ್ಷನ್ ಶೀಘ್ರವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಮೊಸರು ಸೇವನೆ ನಿಯಮಿತವಾಗಿ ಮಾಡಬೇಕಾಗುತ್ತದೆ.

ಇನ್ನು ವಿಟಮಿನ್ ಸಿ ಅಂಶವನ್ನು ಹೊಂದಿರುವಂತ ಅರೇಂಜ್ ಅನ್ನು ಪಾನಕ ರೀತಿಯಲ್ಲಿ ತಯಾರಿಸಿಕೊಂಡು ಮೊಸರಿನೊಂದಿಗೆ ಬೆರೆಸಿಕೊಂಡು ಸೇವನೆ ಮಾಡುವುದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಿದೆ. ಇದು ಕೀಲು ಮಂಡಿ ನೋವು ಕಡಿಮೆ ಮಾಡುವುದರ ಜೊತೆಗೆ ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮುಖ್ಯವಾಗಿ ಅಜೀರ್ಣತೆ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಅಂತಹ ಸಮಸ್ಯೆಗಳಿಗೆ ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇವುಗಳಿಂದ ಸಮಸ್ಯೆಗಳು ಪರಿಹಾರವಾಗುವುದು. ಪ್ರತಿದಿನ ಇಂಗ್ಲಿಷ್ ಮಾತ್ರೆಗಳನ್ನು ನುಂಗುವ ಬದಲು ಇಂತಹ ಮನೆಮದ್ದುಗಳನ್ನು ಬಳಸಿಕೊಳ್ಳುವುದು ಉತ್ತಮ ಅರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.


ಮೊಸರಿನೊಂದಿಗೆ ಸ್ವಲ್ಪ ಅರಿಶಿಣ ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ ಗರ್ಭಿಣಿಯರಿಗೆ ತುಂಬಾ ಉಪಯುಕ್ತವಾಗಿ ಕೆಲಸ ಮಾಡುವುದು. ಇನ್ನು ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನುವುದರಿಂದ ಉತ್ತಮ ಪ್ರೋಟೀನ್ ಲಭಿಸುತ್ತದೆ ಇದರ ಜೊತೆಗೆ ಶರೀರದ ಮಾಂಸಖಂಡಗಳ ಶಕ್ತಿಗೆ ಸಹಾಯಕವಾಗಿವೆ.


ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವಾರು ರೀತಿಯ ಇನ್ಫೆಕ್ಷನ್ಸ್ ರೋಗಗಳು ಬರದಂತೆ ನೋಡಿಕೊಳ್ಳಬಹುದು. ಸ್ವಲ್ಪ ಒಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ಬಾಯಿಹುಣ್ಣು, ಹಲ್ಲುನೋವು, ಇತರ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.


ಸ್ವಲ್ಪ ಜೀರಿಗೆ ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರು ಬೆರೆಸಿಕೊಂಡು ಸೇವನೆ ಮಾಡುತ್ತ ಬಂದರೆ ತ್ವರಿತವಾಗಿ ತೂಕ ಕಡಿಮೆ ಮಾಡಬಹುದು. ಇನ್ನು ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು ಇದರಿಂದ ದೇಹಕ್ಕೆ ಶಕ್ತಿಯು ಸಿಗುತ್ತದೆ ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ. ಹೀಗೆ ನಾನಾ ಸಮಸ್ಯೆಗಳನ್ನು ನಿಯಂತ್ರಿಸುವ ಜೊತೆಗೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಈ ಮೊಸರು.






ದೇಹಕ್ಕೆ ಎನರ್ಜಿ ನೀಡುವ ಈ ನೀರು ಹಲವು ರೋಗಗಳ ನಿವಾರಕ!

ಕೆಲವೊಮ್ಮೆ ನಮ್ಮ ದೇಹಕ್ಕೆ ಆರೋಗ್ಯಕಾರಿ ಅಂಶಗಳನ್ನು ಪೂರೈಸಿಕೊಳ್ಳಲು ನಾವುಗಳು ಮಾಡಬೇಕಾದ ಕೆಲಸವೆಂದರೆ ಉತ್ತಮ ಮನೆಯಲ್ಲಿಯೇ ಕೆಲವೊಂದು ಮನೆಮದ್ದನ್ನು ತಯಾರಿಸಿ ಅವುಗಳನ್ನು ಅನುಸರಿಸಬೇಕಾಗುತ್ತದೆ. ಒಣದ್ರಾಕ್ಷಿ ಬಾದಾಮಿ ಗೋಡಂಬಿ ಪಿಸ್ತಾ ಇವುಗಳಷ್ಟು ಒಣದ್ರಾಕ್ಷಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಇದನ್ನ ಹೆಚ್ಚಾಗಿ ನಾವುಗಳು ಸಿಹಿ ತಿನಿಸುಗಳ ರುಚಿಯನ್ನ ಹೆಚ್ಚಿಸುವ ಪದಾರ್ಥವಷ್ಟೇ ಎಂದು ಭಾವಿಸುತ್ತವೆ. ಆದರೆ ಅದು ತಪ್ಪು ಈ ಒಣ ದ್ರಾಕ್ಷಿಯಲ್ಲಿ ಅದ್ಭುತವಾದ ಆರೋಗ್ಯಕಾರಿ ಅಂಶಗಳು ಅಡಗಿವೆ. ಅದರಲ್ಲೂ ಒಣದ್ರಾಕ್ಷಿಯನ್ನು ನೆನೆಸಿದ ನೀರಿನಲ್ಲಿ ಬಹಳಷ್ಟು ಆರೋಗ್ಯಕಾರಿ ಅಂಶಗಳು ಇವೆ, ಅವುಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನ ನಾವುಗಳು ಈ ಮೂಲಕ ತಿಳಿಯೋಣ.

ಮೊದಲು ಒಣ ದ್ರಾಕ್ಷಿಯನ್ನ ಚನ್ನಾಗಿ ತೊಳೆದು ರಾತ್ರಿ ಸಮಯದಲ್ಲಿ ಒಂದು ಲೋಟ ನೀರಿನಲ್ಲಿ ಸ್ವಲ್ಪ ಪ್ರಮಾಣದ ಒಣದ್ರಾಕ್ಷಿಯನ್ನ ಹಾಕಿ ನೆನೆಯಲು ಬಿಡಿ, ನಂತರದ ದಿನ ಬೆಳಗ್ಗೆ ಆ ನೀರನ್ನ ಸ್ವಲ್ಪ ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿಯನ್ನ ನೆನೆಸಿದ ನೀರನ್ನ ಕುಡಿಯಿರಿ. ಇದನ್ನ ಕುಡಿದ 30 ರಿಂದ 40 ನಿಮಿಷಗಳ ಕಾಲ ಏನನ್ನು ಸೇವಿಸ ಬಾರದು, ಹೀಗೆ ಕನಿಷ್ಠ ನಾಲ್ಕು ತಿಂಗಳುಗಳ ಕಾಲವಾದರು ನೀವು ಮಾಡಬೇಕು. ಸುಮಾರು ಎರಡು ತಿಂಗಳುಗಳ ಬಳಿಕ ನಿಮ್ಮ ಯಕೃತ್ತಿನಲ್ಲಾಗುವ ಬದಲಾವಣೆಯನ್ನ ನೀವು ಕಾಣಬಹುದು.


ಒಣದ್ರಾಕ್ಷಿಯನ್ನ ನೆನೆಸಿದ ನೀರನ್ನ ಸೇವಿಸುವುದರಿಂದ ಯಕೃತ್ ಅಥವಾ ಲಿವರ್ ನ ಅರೋಗ್ಯ ಉತ್ತಮಗೊಳ್ಳುತ್ತದೆ. ಯಕೃತ್ ನ ಸ್ವಚ್ಛತೆಗೆ ಹಲವಾರು ವಿಧಾನಗಳಿವೆ ಅದರಲ್ಲಿ ಈ ಒಣದ್ರಾಕ್ಷಿ ನೆನೆಸಿದ ನೀರು ಸಹ ಒಂದಾಗಿದೆ. ಇದು ಹೆಚ್ಚು ಪ್ರಭಾವವನ್ನ ಬೀರುತ್ತದೆ. ಈ ನೀರಿಗೆ ಒದಗಿರಿವ ಔಷಧಿಯ ಪರಿಣಾಮಕ್ಕೆ ಒಣ ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಕಾರಣ. ಈ ನೀರನ್ನ ಸೇವಿಸಿದ ನಾಲ್ಕೇ ದಿನದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಂಡಿರುವುದನ್ನ ನೀವು ಗಮನಿಸ ಬಹುದಾಗಿದೆ.

ಇದಲ್ಲದೆ ನಮ್ಮ ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿರುತ್ತವೆ. ಈ ಮೇಲಿನ ಸಮಸ್ಯೆಗಳಿಗೆ ಈ ನೀರನ್ನು ಮನೆಯಲ್ಲೇ ತಯಾರಿಸಿ ಇದರ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಒಣದ್ರಾಕ್ಷಿಯಲ್ಲಿ ಫೈಬರ್ ಅಂಶ ಇರುವುದರಿಂದ ಮಲಬದ್ಧತೆ ಇರೋರಿಗೆ ಕೂಡ ಇದು ಸಹಕಾರಿ.

ಸಾಮಾನ್ಯವಾಗಿ ಕಾಡುವಂತ ಈ ಸಮಸ್ಯೆಗಳಿಗೆ ರಾಮಬಾಣ ಜೀರಿಗೆ ನೀರು

ಪ್ರತಿದಿನ ನಾವುಗಳು ಮಾಡುವಂತ ಕೆಲಸದಿಂದ ಅಥವಾ ಸೇವನೆ ಮಾಡುವಂತ ಆಹಾರ ಶೈಲಿಯಿಂದ ಸಾಮಾನ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಆದ್ರೆ ಇವುಗಳಿಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ಸೇವಿಸುವ ಬದಲು ನಾವುಗಳೇ ಮನೆಯಲ್ಲಿ ಈ ಮನೆ ಮದ್ದು ತಯಾರಿಸಿಕೊಂಡು ಸೇವನೆ ಮಾಡುವುದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರದೆ ನೋವುಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಅಡುಗೆಗೆ ಜೀರಿಗೆಯನ್ನು ಬಳಸುತ್ತಾರೆ, ಅದೇ ಜೀರಿಗೆ ಇಂದು ನಿಮಗೆ ಔಷಧಿಯಾಗಿ ಸಾಮಾನ್ಯ ರೋಗಗಳನ್ನು ನಿಯಂತ್ರಿಸುತ್ತದೆ. ಒಂದು ಗ್ಲಾಸ್ ಜೀರಿಗೆ ನೀರು ಸೇವನೆ ಮಾಡುವುದರಿಂದ ಮಲಬದ್ಧತೆ ಮೂತ್ರ ಸಂಬಂಧಿ ರೋಗಗಳು ಹೃದಯ ರೋಗ, ಬಾಯಿಹುಣ್ಣು ಮುಂತಾದ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯದ ರೀತಿಯಲ್ಲಿ ಮಾಡುತ್ತದೆ ಈ ಜೀರಿಗೆ ನೀರು.

ಇನ್ನು ಅಜೀರ್ಣತೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವವರು ಕೂಡ ಈ ಜೀರಿಗೆ ನೀರನ್ನು ತಯಾರಿಸಿಕೊಂಡು ಸೇವನೆ ಮಾಡುವುದು ಉಪಯುಕ್ತ. ಅಸಿಡಿಟಿ ಮುಂತಾದ ಸಮಸ್ಯೆಗಳಿಗೆ ಪ್ರತಿದಿನ ಇಂಗ್ಲಿಷ್ ಮಾತ್ರೆಗಳನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಈ ನೈಸರ್ಗಿಕ ಗುಣಗಳನ್ನು ಹೊಂದಿರುವಂತ ಈ ನೀರು ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣವಾಗಿದೆ.

ಪ್ರತಿದಿನ ಇಂಗ್ಲಿಷ್ ಮಾತ್ರೆಗಳನ್ನು ಸೇವಿಸುವುದರಿಂದ ಕಿಡ್ನಿ ವೈಫಲ್ಯ ಹಾಗೂ ಲಿವರ್ ಸಂಬಂಧಿ ರೋಗಗಳು ಶರೀರಕ್ಕೆ ಅಡ್ಡ ಪರಿಣಾಮವಾಗಿ ಕಾಡುತ್ತದೆ ಹಾಗಾಗಿ ಆದಷ್ಟು ನೈಸರ್ಗಿಕ ಅಂಶಗಳಿಂದ ಆರೋಗ್ಯವನ್ನು ಪಡೆದುಕೊಳ್ಳಿ. ಜೀರಿಗೆಯಲ್ಲಿರುವಂತ ಕೆಲವೊ ಅಂಶಗಳು ದೇಹಕ್ಕೆ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದ ಸಾಮಾನ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಗುಣ ಹೊಂದಿದೆ.

ಬುದ್ದಿಶಕ್ತಿ ಚುರುಕುಗೊಳಿಸುವ ಜೊತೆಗೆ ಕಣ್ಣಿನ ಆರೋಗ್ಯಕ್ಕೆ ಜೇನು ಉಪಯುಕ್ತ

ಸಾಮಾನ್ಯವಾಗಿ ಜೇನು ತಿನ್ನುವುದರಿಂದ ನಾಲಿಗೆ ರುಚಿಯನ್ನು ಕಂಡುಕೊಳ್ಳಬಹುದು ಆದ್ರೆ ಇದರಿಂದ ಬರಿ ರುಚಿ ಅಷ್ಟೇ ಅಲ್ದೆ ದೇಹದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ವೃದ್ಧಿಸಿಕೊಳ್ಳಬಹುದಾಗಿದೆ. ಜೇನು ಬಳಕೆಯಿಂದ ನಾನಾ ರೀತಿಯ ಸಾಮಾನ್ಯ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು. ಇನ್ನು ಜೇನನ್ನು ಹಲವು ರೀತಿಯ ಮನೆಮದ್ದುಗಳ ಬಳಕೆಯಲ್ಲಿ ಬಳಸಲಾಗುತ್ತದೆ. ಜೇನಿನಿಂದ ಎಷ್ಟೆಲ್ಲ ಪ್ರಯೋಜನವಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.

ಮನುಷ್ಯನ ಆಯಸ್ಸು ಹೆಚ್ಚಿಸುವ ಗುಣ ಜೇನಿನಲ್ಲಿದೆ ಅಷ್ಟೇ ಅಲ್ದೆ ಬುದ್ಧಿಶಕ್ತಿಯನ್ನು ಚುರುಕು ಗೊಳಿಸುವ ಜೊತೆಗೆ ಕೆಮ್ಮು ನೆಗಡಿ ಸಾಮಾನ್ಯ ಶೀತ ನಿವಾರಿಸುವ ಗುಣ ಈ ಜೇನುತುಪ್ಪದಲ್ಲಿದೆ. ಅಷ್ಟೇ ಅಲ್ದೆ ಕಣ್ಣಿನ ಆರೋಗ್ಯವನ್ನು ವೃದ್ಧಿಸುವ ಗುಣಗಳನ್ನು ಜೇನುತುಪ್ಪದಲ್ಲಿ ಕಾಣಬುದಾಗಿದೆ. ನಾನು ತೆಳ್ಳಗೆ ಇದೀನಿ ದಪ್ಪವಾಗಬೇಕು ಅನ್ನೋರು ಅಥವಾ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅನ್ನೋರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ದೇಹದ ತೂಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು.

ನಾನು ದಪ್ಪ ಇದೀನಿ ತೆಳ್ಳಗೆ ಆಗಬೇಕು ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಅನ್ನೋರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಜೇನುತುಪ್ಪ ಹಾಕಿ ಕುಡಿಯೋದ್ರಿಂದ ದೇಹದಲ್ಲಿನ ಅನಗತ್ಯ ಬೊಜ್ಜು ನಿವಾರಣೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ನಿವಾರಿಸಿಕೊಳ್ಳಬಹುದು.


ದೇಹದಲ್ಲಿ ಆಗುವಂತ ಚಿಕ್ಕ ಪುಟ್ಟ ಗಾಯಗಳನ್ನು ಬೇಗನೆ ನಿವಾರಿಸಿಕೊಳ್ಳಲು ಜೇನುತುಪ್ಪವನ್ನು ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತವೆ. ದೈಹಿಕ ಕಾಯಿಲೆಗಳನ್ನು ನಿವಾರಿಸಲು ಅಷ್ಟೇ ಅಲ್ಲ ಇದರಲ್ಲಿದೆ ಸೌಂದರ್ಯವನ್ನು ವೃದಿಸುವಂತ ಗುಣಗಳು ಹೌದು ಮುಖದ ಸೌಂದರ್ಯಕ್ಕೆ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಲು ಮುಖಕ್ಕೆ ಜೇನುತುಪ್ಪವನ್ನು ಲೇಪಿಸಿಕೊಳ್ಳಬೇಕಾಗುತ್ತದೆ. ಮುಖದಲ್ಲಿನ ಚರ್ಮದ ನೆರಿಗೆಗಳನ್ನು ಹಾಗೂ ಚಿಕ್ಕವಯಸ್ಸಲ್ಲೇ ವಯಸ್ಸಾದಂತೆ ಕಾಣುವ ಮುಖದ ಛಾಯೆಯನ್ನು ನಿವಾರಿಸಲು ವಾರಕ್ಕೆ ಎರಡು ಬಾರಿ ಜೇನುತುಪ್ಪ ಹಾಕಿ ಮಸಾಜ್‌ ಮಾಡಿದರೆ ಪರಿಹಾರ ಕಾಣಬಹುದು. ಹೀಗೆ ಹತ್ತಾರು ಲಾಭದಾಯಕ ಅಂಶಗಳನ್ನು ಜೇನುತುಪ್ಪದಿಂದ ಪಡೆದುಕೊಳಬಹುದಾಗಿದೆ.








Sunday, 6 October 2019

ನಿಮ್ಮ ತ್ವಜೆ ಆಕರ್ಷಿತವಾಗಿ ಇರಬೇಕು ಅಂದ್ರೆ ಈ ಸಣ್ಣ ಕೆಲಸ ಮಾಡಿರಿ

ಆಕರ್ಷಕ ತ್ವಜೆ ಎಲ್ಲರಿಗೂ ಬೇಕು ಆದರೆ ಹೇಗೆ ಪಡೆಯುವುದು ಅಂತ ನಾನು ಈ ಲೇಖನದಲ್ಲಿ ಹೇಳುತ್ತೇವೆ ಬನ್ನಿ ತಿಳಿಯೋಣ. ನಾವು ಬೆಳಗ್ಗೆ ಮೊದಲು ಮಾಡಬೇಕಾಗಿರುವ ಕೆಲಸ ರೋಸ್ ವಾಟರ್ ನಿಂದಾ ನಮ್ಮ ಮುಖವನ್ನು ಶುದ್ಧ ಮಾಡಿಕೊಳ್ಳುವುದು. ಅದು ಹೇಗೆ ಎಂದರೆ ಈ ರೋಸ್ ವಾಟರ್ ನಲ್ಲಿ ಹತ್ತಿಯನ್ನು ಅದ್ದಿ ಇದನ್ನು ಮುಖದ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಮುಖವನ್ನು ರೋಸ್ ವಾಟರ್ ನಿಂದಾ ತೊಳೆದ ಮೇಲೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿ ಪ್ರತಿ ದಿನವೂ ಕುಡಿಯಬೇಕು. ನಿಂಬೆರಸ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ನಿಂಬೆ ರಸ ನಮ್ಮ ದೇಹದಲ್ಲಿ ಇರುವ ಕಲ್ಮಶವನ್ನು ತೆಗೆದು ಹಾಕುತ್ತವೆ ಹಾಗೂ ವಿಟಮಿನ್ ಸಿ ಯಿಂದ ನಮ್ಮ ಮುಖಕ್ಕೆ ತುಂಬಾ ಹೊಳಪು ತರುತ್ತದೆ.

ಸ್ನೇಹಿತರೇ ಬೆಚ್ಚಗಿನ ನೀರು ಹಾಗೂ ನಿಂಬೆ ರಸದಿಂದ ನಮ್ಮ ದೇಹಕ್ಕೆ ಉಪಯೋಗ ತುಂಬಾ ಇದೆ. ತಿಂಡಿಯನ್ನು 10 ನಿಮಿಷ ಮುಂಚೆ ನಾವು ಕುಡಿಯ ಬೇಕಾಗಿರುವುದು ಡಿಟಾಕ್ಸ್ ಜ್ಯೂಸ್. ಡಿಟಾಕ್ಸ್ ಜ್ಯೂಸ್ ಮಾಡುವುದು ಹೇಗೆ ಅಂತ ನಾವು ನಿಮಗೆ ಹೇಳುತ್ತವೆ. ಈ ಜ್ಯೂಸ್ ಹೇಗೆ ಮಾಡುವುದು ಎಂದು ತಿಳಿಯುವುದಕ್ಕೆ ಮುಂಚೆ ನಾವು ನಿಮಗೆ ಕೆಲವು ಸಲಹೆಗಳನ್ನು ಕೊಡುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿರಿ. ಡಿಟಾಕ್ಸ್ ರೆಸಿಪಿ ಮಾಡಲು ಬೇಕಾಗಿರುವುದು ಒಂದು ಕ್ಯಾರೆಟ್ ಅರ್ಧ ನಿಂಬೆ ಹಣ್ಣು ಅರ್ಧ ಬೀಟ್ರೂಟ್ ಹಾಗೂ ಒಂದು ಸೇಬು ಇದನ್ನು ನಾವು ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ ಇದು ಕೆಂಪು ಬಣ್ಣ ಇರುತ್ತದೆ ಇದನ್ನು ತಿಂಡಿ ತಿನ್ನುವ 10 ನಿಮಿಷ ಮುಂಚೆ ಕುಡಿಯಬೇಕು ಹೀಗೆ ಮಾಡಿದರೆ ನಿಮ್ಮ ತ್ವಜೆ ಖಂಡಿತವಾಗಿ ಹೊಳಪು ಬರುತ್ತದೆ.

ಮದ್ಯಾಹ್ನ ಊಟದಲ್ಲಿ ನಾವು ತಿನ್ನ ಬೇಕಾಗಿರುವುದು ಟೊಮ್ಯಾಟೋ ವನ್ನು ಸಲಾಡ್ ಮಾಡಿ ಒಂದು ಬೌಲ್ ನಲ್ಲಿ ಹಾಕಿ ತಿನ್ನೋಣ ಊಟದ ಜೊತೆ ಇದನ್ನು ತಿನ್ನಬಹುದು ನಂತರ ಸಾಯಂಕಾಲ ಸ್ನ್ಯಾಕ್ ಸಮಯದಲ್ಲಿ ಏನು ತಿನ್ನಬೇಕು ಎಂದರೆ ಪಕೋಡ ಬೋಂಡಾ ಪದಾರ್ಥ ಅಲ್ಲ ಎಳನೀರು ಕುಡಿಯಿರಿ ಇಲ್ಲ ಅಂದರೆ ಆಮ್ಲ ಜ್ಯೂಸ್ ಇಲ್ಲವಾದರೆ ಅಲೋವೆರಾ ಜ್ಯೂಸ್ ಕುಡಿಯಿರಿ ಈ ಮೂರು ಜ್ಯೂಸ್ ನಲ್ಲಿ ಯಾವುದಾದರೂ ಒಂದನ್ನು ಕುಡಿಯಬಹುದು. ಆದ ನಂತರ ಊಟದ ಸಮಯದಲ್ಲಿ ಹಣ್ಣಿನ ಸಲಾಡ್ ಮಾಡೋಣ ಈ ಫ್ರೂಟ್ ಸಲಾಡ್ ಮಾಡುವುದು ಹೇಗೆ ಎಂದರೆ ಪೈನಾಪಲ್ ತೆಗೆದುಕೊಳ್ಳಿ ಅಥವಾ ಕಿವಿ ಹಾಗೂ ಸ್ಟ್ರಾಬೆರಿ ತೆಗೆದುಕೊಳ್ಳಿ

ಈ ಮೂರು ಹಾಗೂ ಸೌತೆಕಾಯಿಯನ್ನು ಸೇರಿಸಿಕೊಳ್ಳಿ ಮತ್ತು ಈ ಐದು ಪದಾರ್ಥಗಳನ್ನು ಮಿಕ್ಸ್ ಮಾಡಿ ಸಲಾಡ್ ತಯಾರು ಮಾಡಿ ಹಾಗೂ ಅದನ್ನು ನಾರ್ಮಲ್ ಊಟದ ಜೊತೆಗೆ ತಿನ್ನಿರಿ. ಅಷ್ಟೆ ಅಲ್ಲದೆ ಮಲಗುವ ಮುಂಚೆ ಹಾಲು ಹಾಗೂ ಅರಿಶಿಣ ವನ್ನು ಸೇರಿಸಿ ಕುಡಿಯಿರಿ ಅದು ಚರ್ಮಕ್ಕೆ ಹೊಳಪು ಕೊಡುತ್ತದೆ. ವಾರದಲ್ಲಿ 2 ಬಾರಿ ನಿಮ್ಮ ತ್ವಜೆಯನ್ನು ಸ್ಕ್ರಬ್ ಮಾಡಿ ನಾರ್ಮಲ್ ಸ್ಕ್ರಬ್ ಯಿಂದ ಸ್ಕ್ರಬ್ ಮಾಡಿದರೆ ನಡೆಯುತ್ತದೆ ಇಲ್ಲ ಅಂದರೆ ನಂತರ ಕಾಫಿ ಪುಡಿ ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ ನೀರು ಜೊತೆಯಲ್ಲಿ ಸ್ಕ್ರಬ್ ಮಾಡಬಹುದು.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಹತ್ತಾರು ಲಾಭ

ಸ್ನೇಹಿತರೆ ಸಾಧಾರಣವಾಗಿ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಬ್ರಷ್ ಮಾಡಿಕೊಂಡು ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಮ್ಮಲ್ಲಿ ತುಂಬಾ ಮಂದಿಗೆ ಇರುತ್ತೆ ಆದರೆ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ನಿಮಗೆ ಗೊತ್ತಾ ಗೊತ್ತಾದರೆ ಖಂಡಿತ ನೀವು ಬರೀ ಹೊಟ್ಟೆಯಲ್ಲಿ 3 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡುತ್ತೀರಿ ಏಕೆಂದರೆ ಈ ಅಭ್ಯಾಸದಿಂದ ನಮ್ಮ ಆರೋಗ್ಯವನ್ನು ತುಂಬಾ ಮಟ್ಟಿಗೆ ಕಾಪಾಡಿ ಕೊಳ್ಳಬಹುದು ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ನೋಡೋಣ ಬನ್ನಿ.

ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಉಗುರು ಬೆಚ್ಚಿಗಿರುವ ನೀರನ್ನು ಕುಡಿದರೆ ಜೀರ್ಣಕ್ರಿಯೆ ಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಹಾಗೆಯೇ ಮಲಬದ್ಧತೆ ಅಂತಹ ಸಮಸ್ಯೆಗಳು ಕೂಡ ಬಗೆ ಹರಿಯುತ್ತದೆ ಮುಖ್ಯವಾಗಿ ಶರೀರದಲ್ಲಿ ರಕ್ತ ಪರಿಚಲನೆ ಎನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ ಏಕೆಂದರೆ ಶರೀರದಲ್ಲಿ ಸಂಗ್ರಹಣೆ ಆದ ಕೊಬ್ಬು ಎನ್ನುವುದು ಈ ನೀರನ್ನು ಕುಡಿಯುವುದರಿಂದ ಕರಗಿ ಹೋಗಿ ಬೇಗ ತೂಕವನ್ನು ಕೂಡ ಕಡಿಮೆ ಮಾಡಬಹುದು ಹಾಗೆಯೇ ಶರೀರದಲ್ಲಿ ಉಷ್ಣಾಂಶ ಎನ್ನುವುದು ನಿಯಂತ್ರಣದಲ್ಲಿ ಇದ್ದು ಜ್ವರ ಅಂತಹ ಅನಾರೋಗ್ಯ ಸಮಸ್ಯೆಗಳು ಕೂಡ ಬಾರದೇ ಇರುತ್ತದೆ ಹಾಗೆಯೇ ಶರೀರದಲ್ಲಿ ಇರುವ ಅಂಗಾಂಗಳು ಕೂಡ ಆರೋಗ್ಯವಾಗಿ ಇರುತ್ತದೆ ಮತ್ತು ಕೆಮ್ಮು ನೆಗಡಿ ಕತ್ತು ನೋವಿನಂತಹ ಶ್ವಾಸ ಕೋಶ ಸಮಸ್ಯೆಗಳಿಂದ ಅಂದರೆ ಅಸ್ತಮಾ ಖಾಯಿಲೆಯಿಂದ ನರಳುತ್ತಾ ಇರುವವರು ಕೂಡ ಈ ಉಗುರು ಬೆಚ್ಛಾಗಿನ ನೀರನ್ನು ಕುಡಿಯುವುದರಿಂದ ನಾವು ತದೆಗಟ್ಟ ಬಹುದು ಹಾಗೆಯೇ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚಾಗುತ್ತದೆ ಮುಖ್ಯವಾಗಿ ಬಿಸಿ ನೀರನ್ನು ಕುಡಿಯುವುದರಿಂದ ಕೇಂದ್ರ ನರ ಮಂಡಲದ ಕಾರ್ಯ ವೃದ್ಧಿ ಕೂಡ ಆಗುತ್ತದೆ ಇದರಿಂದ ಒತ್ತಡ ಎನ್ನುವುದು ಕೂಡ ಕಡಿಮೆ ಆಗುತ್ತದೆ.

ಮುಖ್ಯವಾಗಿ ಪ್ರತಿ ದಿನ ಬೆಳಗ್ಗೆ ಅರ್ಧ ಗ್ಲಾಸ್ ಬೆಚ್ಚಾಗಿನ ನೀರಿನಲ್ಲಿ ಒಂದು ಸ್ಪೂನ್ ಜೇನುತುಪ್ಪ ಅರ್ಧ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿದರೆ ಮಲ ಬದ್ಧತೆ ಹೈಪರ್ ಅಸಿಡಿಟಿ ಅಂತಹ ಸಮಸ್ಯೆಗಳು ಕೂಡ ಬರುವುದಿಲ್ಲ. ಬಿಸಿ ನೀರಿನ ಸೇವನೆ ಚರ್ಮಕ್ಕೂ ಹೊಳಪು ತರಬಲ್ಲದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬಿಸಿನೀರು ಟಾಕ್ಸಿನ್ ಗಳನ್ನು ಹೊರಹಾಕುತ್ತದೆ ಹಾಗಾಗಿ ಚರ್ಮಕ್ಕೆ ಹೊಳಪು ಬರುತ್ತದೆ ಬಿಸಿನೀರು ಸೇವನೆ ಹಸಿವನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದರೆ ನಿಮ್ಮ ಕಿಡ್ನಿ ಮತ್ತು ಲಿವರ್ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲು ಕೆರೆತ ಶೀತ ಇವುಗಳಿಂದ ಸಹಾ ಪಾರಾಗಬಹುದು ಶೀತ ವಾದಾಗ ಬಿಸಿನೀರನ್ನು ಕುಡಿಯುವುದು ಉತ್ತಮ. ಮುತ್ತಿನ ಸೆಳೆತ ಮತ್ತು ನೋವಿನಿಂದ ಸಹಾ ಬಿಸಿನೀರು ಪರಿಹಾರ ಒದಗಿಸುತ್ತದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.