ಮನುಷ್ಯನ ಆಯಸ್ಸು ಹೆಚ್ಚಿಸುವ ಗುಣ ಜೇನಿನಲ್ಲಿದೆ ಅಷ್ಟೇ ಅಲ್ದೆ ಬುದ್ಧಿಶಕ್ತಿಯನ್ನು ಚುರುಕು ಗೊಳಿಸುವ ಜೊತೆಗೆ ಕೆಮ್ಮು ನೆಗಡಿ ಸಾಮಾನ್ಯ ಶೀತ ನಿವಾರಿಸುವ ಗುಣ ಈ ಜೇನುತುಪ್ಪದಲ್ಲಿದೆ. ಅಷ್ಟೇ ಅಲ್ದೆ ಕಣ್ಣಿನ ಆರೋಗ್ಯವನ್ನು ವೃದ್ಧಿಸುವ ಗುಣಗಳನ್ನು ಜೇನುತುಪ್ಪದಲ್ಲಿ ಕಾಣಬುದಾಗಿದೆ. ನಾನು ತೆಳ್ಳಗೆ ಇದೀನಿ ದಪ್ಪವಾಗಬೇಕು ಅನ್ನೋರು ಅಥವಾ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅನ್ನೋರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ದೇಹದ ತೂಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು.
ನಾನು ದಪ್ಪ ಇದೀನಿ ತೆಳ್ಳಗೆ ಆಗಬೇಕು ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಅನ್ನೋರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಜೇನುತುಪ್ಪ ಹಾಕಿ ಕುಡಿಯೋದ್ರಿಂದ ದೇಹದಲ್ಲಿನ ಅನಗತ್ಯ ಬೊಜ್ಜು ನಿವಾರಣೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ನಿವಾರಿಸಿಕೊಳ್ಳಬಹುದು.
ದೇಹದಲ್ಲಿ ಆಗುವಂತ ಚಿಕ್ಕ ಪುಟ್ಟ ಗಾಯಗಳನ್ನು ಬೇಗನೆ ನಿವಾರಿಸಿಕೊಳ್ಳಲು ಜೇನುತುಪ್ಪವನ್ನು ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತವೆ. ದೈಹಿಕ ಕಾಯಿಲೆಗಳನ್ನು ನಿವಾರಿಸಲು ಅಷ್ಟೇ ಅಲ್ಲ ಇದರಲ್ಲಿದೆ ಸೌಂದರ್ಯವನ್ನು ವೃದಿಸುವಂತ ಗುಣಗಳು ಹೌದು ಮುಖದ ಸೌಂದರ್ಯಕ್ಕೆ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಲು ಮುಖಕ್ಕೆ ಜೇನುತುಪ್ಪವನ್ನು ಲೇಪಿಸಿಕೊಳ್ಳಬೇಕಾಗುತ್ತದೆ. ಮುಖದಲ್ಲಿನ ಚರ್ಮದ ನೆರಿಗೆಗಳನ್ನು ಹಾಗೂ ಚಿಕ್ಕವಯಸ್ಸಲ್ಲೇ ವಯಸ್ಸಾದಂತೆ ಕಾಣುವ ಮುಖದ ಛಾಯೆಯನ್ನು ನಿವಾರಿಸಲು ವಾರಕ್ಕೆ ಎರಡು ಬಾರಿ ಜೇನುತುಪ್ಪ ಹಾಕಿ ಮಸಾಜ್ ಮಾಡಿದರೆ ಪರಿಹಾರ ಕಾಣಬಹುದು. ಹೀಗೆ ಹತ್ತಾರು ಲಾಭದಾಯಕ ಅಂಶಗಳನ್ನು ಜೇನುತುಪ್ಪದಿಂದ ಪಡೆದುಕೊಳಬಹುದಾಗಿದೆ.
No comments:
Post a Comment