ಸ್ನೇಹಿತರೆ ಸಾಧಾರಣವಾಗಿ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಬ್ರಷ್ ಮಾಡಿಕೊಂಡು ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಮ್ಮಲ್ಲಿ ತುಂಬಾ ಮಂದಿಗೆ ಇರುತ್ತೆ ಆದರೆ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ನಿಮಗೆ ಗೊತ್ತಾ ಗೊತ್ತಾದರೆ ಖಂಡಿತ ನೀವು ಬರೀ ಹೊಟ್ಟೆಯಲ್ಲಿ 3 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡುತ್ತೀರಿ ಏಕೆಂದರೆ ಈ ಅಭ್ಯಾಸದಿಂದ ನಮ್ಮ ಆರೋಗ್ಯವನ್ನು ತುಂಬಾ ಮಟ್ಟಿಗೆ ಕಾಪಾಡಿ ಕೊಳ್ಳಬಹುದು ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ನೋಡೋಣ ಬನ್ನಿ.
ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಉಗುರು ಬೆಚ್ಚಿಗಿರುವ ನೀರನ್ನು ಕುಡಿದರೆ ಜೀರ್ಣಕ್ರಿಯೆ ಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಹಾಗೆಯೇ ಮಲಬದ್ಧತೆ ಅಂತಹ ಸಮಸ್ಯೆಗಳು ಕೂಡ ಬಗೆ ಹರಿಯುತ್ತದೆ ಮುಖ್ಯವಾಗಿ ಶರೀರದಲ್ಲಿ ರಕ್ತ ಪರಿಚಲನೆ ಎನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ ಏಕೆಂದರೆ ಶರೀರದಲ್ಲಿ ಸಂಗ್ರಹಣೆ ಆದ ಕೊಬ್ಬು ಎನ್ನುವುದು ಈ ನೀರನ್ನು ಕುಡಿಯುವುದರಿಂದ ಕರಗಿ ಹೋಗಿ ಬೇಗ ತೂಕವನ್ನು ಕೂಡ ಕಡಿಮೆ ಮಾಡಬಹುದು ಹಾಗೆಯೇ ಶರೀರದಲ್ಲಿ ಉಷ್ಣಾಂಶ ಎನ್ನುವುದು ನಿಯಂತ್ರಣದಲ್ಲಿ ಇದ್ದು ಜ್ವರ ಅಂತಹ ಅನಾರೋಗ್ಯ ಸಮಸ್ಯೆಗಳು ಕೂಡ ಬಾರದೇ ಇರುತ್ತದೆ ಹಾಗೆಯೇ ಶರೀರದಲ್ಲಿ ಇರುವ ಅಂಗಾಂಗಳು ಕೂಡ ಆರೋಗ್ಯವಾಗಿ ಇರುತ್ತದೆ ಮತ್ತು ಕೆಮ್ಮು ನೆಗಡಿ ಕತ್ತು ನೋವಿನಂತಹ ಶ್ವಾಸ ಕೋಶ ಸಮಸ್ಯೆಗಳಿಂದ ಅಂದರೆ ಅಸ್ತಮಾ ಖಾಯಿಲೆಯಿಂದ ನರಳುತ್ತಾ ಇರುವವರು ಕೂಡ ಈ ಉಗುರು ಬೆಚ್ಛಾಗಿನ ನೀರನ್ನು ಕುಡಿಯುವುದರಿಂದ ನಾವು ತದೆಗಟ್ಟ ಬಹುದು ಹಾಗೆಯೇ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚಾಗುತ್ತದೆ ಮುಖ್ಯವಾಗಿ ಬಿಸಿ ನೀರನ್ನು ಕುಡಿಯುವುದರಿಂದ ಕೇಂದ್ರ ನರ ಮಂಡಲದ ಕಾರ್ಯ ವೃದ್ಧಿ ಕೂಡ ಆಗುತ್ತದೆ ಇದರಿಂದ ಒತ್ತಡ ಎನ್ನುವುದು ಕೂಡ ಕಡಿಮೆ ಆಗುತ್ತದೆ.
ಮುಖ್ಯವಾಗಿ ಪ್ರತಿ ದಿನ ಬೆಳಗ್ಗೆ ಅರ್ಧ ಗ್ಲಾಸ್ ಬೆಚ್ಚಾಗಿನ ನೀರಿನಲ್ಲಿ ಒಂದು ಸ್ಪೂನ್ ಜೇನುತುಪ್ಪ ಅರ್ಧ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿದರೆ ಮಲ ಬದ್ಧತೆ ಹೈಪರ್ ಅಸಿಡಿಟಿ ಅಂತಹ ಸಮಸ್ಯೆಗಳು ಕೂಡ ಬರುವುದಿಲ್ಲ. ಬಿಸಿ ನೀರಿನ ಸೇವನೆ ಚರ್ಮಕ್ಕೂ ಹೊಳಪು ತರಬಲ್ಲದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬಿಸಿನೀರು ಟಾಕ್ಸಿನ್ ಗಳನ್ನು ಹೊರಹಾಕುತ್ತದೆ ಹಾಗಾಗಿ ಚರ್ಮಕ್ಕೆ ಹೊಳಪು ಬರುತ್ತದೆ ಬಿಸಿನೀರು ಸೇವನೆ ಹಸಿವನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದರೆ ನಿಮ್ಮ ಕಿಡ್ನಿ ಮತ್ತು ಲಿವರ್ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲು ಕೆರೆತ ಶೀತ ಇವುಗಳಿಂದ ಸಹಾ ಪಾರಾಗಬಹುದು ಶೀತ ವಾದಾಗ ಬಿಸಿನೀರನ್ನು ಕುಡಿಯುವುದು ಉತ್ತಮ. ಮುತ್ತಿನ ಸೆಳೆತ ಮತ್ತು ನೋವಿನಿಂದ ಸಹಾ ಬಿಸಿನೀರು ಪರಿಹಾರ ಒದಗಿಸುತ್ತದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
No comments:
Post a Comment