" ಗರಿಕೆ ಹುಲ್ಲು " ಎಲ್ಲರಿಗೂ ಗೊತ್ತು. ಗ್ರಾಮೀಣ ಭಾಷೆಯಲ್ಲಿ ಕರಿಕೆ , ಗರಿಕೆ , ಅಮರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಆಂಗ್ಲ ಭಾಷೆಯಲ್ಲಿ..Durva Grass, Doob Grass,
Devil Grass (cynodon dactylon ವೈಜ್ಞಾನಿಕ ಹೆಸರು) ಇನ್ನೂ ಹಲವಾರು ಹೆಸರುಗಳಿವೆ.
ಸಂಸ್ಕೃತ ಭಾಷೆಯಲ್ಲಿ...ಅಮರಿ , ಅಮೃತಾ , ದೂರ್ವಾ ಇತ್ಯಾದಿ.
ಹಿಂದಿ ಭಾಷೆಯಲ್ಲಿ...ದೂಬ್, ರಾಮಘಾಸ್, ದೂರ್ಬಾ ಇತ್ಯಾದಿ.
ತುಳಸಿಯ ನಂತರ ಗರಿಕೆ ಹುಲ್ಲು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಶ್ರೀ ಕೃಷ್ಣನಿಗೆ ತುಳಸಿಯ ಅರ್ಚನೆ ಮಾಡಿದರೆ, ವಿಘ್ನನಿವಾರಕ ಗಣೇಶನಿಗೆ ಗರಿಕೆ ಹುಲ್ಲಿನ ಅರ್ಚನೆ ಮಾಡಲಾಗುತ್ತದೆ.
ಗರಿಕೆ ಹುಲ್ಲು ಒಂದು ಕಡೆ ಬೇರು ಬಿಟ್ಟರೆ ಹಿಂದೆ ಹಾಗೇ ಬೇರುಗಳನ್ನು ಬಿಡುತ್ತ ತ್ವರಿತವಾಗಿ ಬೆಳೆಯುತ್ತದೆ. ಹೊಲದಲ್ಲಿ ಬೆಳೆಯಲು ಬಿಟ್ಟರೆ ನಿವಾರಿಸಲು ಬಹಳೇ ಕಷ್ಟ ಪಡಬೇಕಾಗುತ್ತದೆ. ಏಕೆಂದರೆ ಗರಿಕೆ ಹುಲ್ಲಿನ ಬೇರುಗಳು 01 ರಿಂದ 02 ಮೀಟರ್ ಆಳದವರೆಗೂ ಇಳಿದು ಬಿಡುತ್ತವೆ.
ಸರ್ವ ರೋಗ ನಿವಾರಕವಾಗಿ ಕೆಲಸ ಮಾಡುವ ಈ ಗರಿಕೆ ಹುಲ್ಲಿಗೆ ಅಮೃತ ಹುಲ್ಲು ಎಂದೂ ಕರೆಯಲಾಗಿದೆ
{ ಗರಿಕೆ ಹುಲ್ಲಿನ ಪ್ರಯೋಜನಗಳು}
* ಚರ್ಮರೋಗ ಗಳಿಗೆ... ಇದರ ರಸದಲ್ಲಿ ಅರಿಶಿನ ಪುಡಿ ಹಾಕಿ ಲೇಪಿಸಬೇಕು. ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಯಲ್ಲಿ ಗರಿಕೆ ಹುಲ್ಲನ್ನು ಕುದಿಸಿ ಉಪಯೋಗಿ ಸಬಹುದು.
* 20 ರಿಂದ 30 ML ರಸ ಜೇನು ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.
* ಬೊಜ್ಜು ಕರಗಿಸಲು ಸಹಕಾರಿಯಾಗಿದೆ.
* ಹೊಟ್ಟೆ ನೋವಿಗೆ ರಸ ಸೇವನೆ ಉಪಯುಕ್ತವಾಗಿದೆ.
* ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು.
*ವಸಡಿನ ರಕ್ತ ಸ್ರಾವ ನಿವಾರಕ ವಾಗಿ ಕೆಲಸ ಮಾಡುತ್ತದೆ.
*ಕಿವಿ ನೋವಿಗೆ, ಶುಭ್ರವಾದ ಬಟ್ಟೆಯಲ್ಲಿ ರಸ ಸೋಸಿ ನಾಲ್ಕೈದು ಹನಿ ಹಾಕಬಹುದು.
* ಮಧುಮೇಹಿಗಳಿಗೆ ಕೂಡ ಉತ್ತಮ.
*ಗರಿಕೆ ಹುಲ್ಲಿನ ರಸದಲ್ಲಿ ಕೊಬ್ಬರಿ ಎಣ್ಣೆ ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆ ಗಟ್ಟುತ್ತದೆ, ಕೇಶ ಕಾಂತಿ ಹೆಚ್ಚುತ್ತದೆ.
*ಉಗುರು ಸುತ್ತಿಗೆ... ರಸದಲ್ಲಿ ಅರಿಶಿನ ಮತ್ತು ಸುಣ್ಣ ಬೆರೆಸಿ ಹೆಚ್ಚಬೇಕು.
* ಬೆಳೆಯುವ ಮಕ್ಕಳಿಗೆ 10ML ರಸಕ್ಕೆ ಜೇನು ಬೆರೆಸಿ ಕುಡಿಸಬೇಕು.
*ಕಣ್ಣು ನೋವು, ಕಣ್ಣುಗಳು ಕೆಂಪಾದಾಗ ಗರಿಕೆ ಹುಲ್ಲನ್ನು ಕುಟ್ಟಿ ಕಣ್ಣುಗಳನ್ನು ಮುಚ್ಚಿ ಬಿಳಿ ಬಟ್ಟೆ ಹಾಕಿಕೊಂಡು ರೆಪ್ಪೆಗಳ ಮೇಲೆ ಇಡಬೇಕು.
*ಗರಿಕೆ ಹುಲ್ಲಿನ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಉರಿ ಮೂತ್ರ ನಿವಾರಕ ವಾಗಿ ಕೆಲಸ ಮಾಡುತ್ತದೆ.
ಪ್ರೋಟಿನ್, ವಿಟಮಿನ್, ಕಾರ್ಬೋಹೈಡ್ರೇಟ್, ಮೆಗ್ನೀಷಿಯಂ, ಸೋಡಿಯಂ ಇತ್ಯಾದಿ ಅಂಶಗಳು ಇರುವ ಈ ಗರಿಕೆ ಹುಲ್ಲಿನ ರಸ ಸೇವನೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. S.H.Nadaf
No comments:
Post a Comment