ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿದೆ. ಇದು ನಮ್ಮ ಹಿರಿಯರ ಅನುಭವದ ಮಾತು. ಆರೋಗ್ಯ ಇಲ್ಲದಿದ್ದರೆ ಜೀವನವೇ ವ್ಯರ್ಥ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಚೆನ್ನಾಗಿರುವ ಆಹಾರವನ್ನು ಸೇವಿಸಿ ಉತ್ತಮವಾದ ದೈಹಿಕ ವ್ಯಾಯಾಮವನ್ನು ಅನುಸರಿಸಿಕೊಂಡು ನಮ್ಮ ದೇಹವನ್ನು ಸುಸ್ಥಿಯಲ್ಲಿಡಬೇಕು.
ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಾವು ಪ್ರತಿದಿನ ಒಂದು ಅಭ್ಯಾಸಕ್ಕೆ ದಿನಚರಿಗೆ ಹೊಂದಿಕೊಂಡಿರುತ್ತೇವೆ. ಈಗಿನ ಹೈ ಟೆಕ್ ಯುಗದಲ್ಲಿ ಜನರಿಗೆ ಯಾವುದಕ್ಕೂ ಟೈಮ್ ಸಾಕಾಗಲ್ಲ. ಬೆಳಗ್ಗೆ ತಿಂಡಿ ತಿನ್ನೋದಕ್ಕೂ ಸಮಯ ಇರೋದಿಲ್ಲ. ಸಂಜೆ ಆಫೀಸ್ನಿಂದ ಬರೋವಾಗ ಏನಾದ್ರೂ ಜಂಕ್ ಫುಡ್ ತಿನ್ನಬೇಕೂಂತ ಅನ್ಸುತ್ತೆ. ದೇಹಕ್ಕೆ ಸರಿಯಾದ ವ್ಯಾಯಾಮ ಇರಲ್ಲ. ನಮಗೆ ತಿಳಿಯದಂತೆ ನಮ್ಮ ದೇಹವು ರೋಗಗಳ ಗೂಡಾಗಿರುತ್ತದೆ. ಇದು ನಮ್ಮ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಾಗಾಗಿ ನಮ್ಮ ಪ್ರತಿದಿನದ ದಿನಚರಿಯಲ್ಲಿ ಒಂದು ಶಿಸ್ತನ್ನು ಅಳವಡಿಸಿಕೊಂಡರೆ ನಾವು ಹೆಚ್ಚು ಆರೋಗ್ಯವಾಗಿ ಇರಬಹುದು.
ಈ ಅಭ್ಯಾಸಗಳನ್ನು ಪ್ರತಿದಿನ ನಮ್ಮ ಜೀವನದಲ್ಲಿ ರೂಢಿ ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆ ಅಭ್ಯಾಸಗಳು ಯಾವುದೆಂದು ತಿಳಿಯೋಣ.

1. ಬೆಳಗ್ಗೆ ಬೇಗ ಏಳಿ
ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ. ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ. ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು ವೈದ್ಯರು ಹೇಳುತ್ತಾರೆ.
2. ವ್ಯಾಯಾಮ ಮಾಡಿ
ಪ್ರತಿದಿನ ನಾವು ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ದೈಹಿಕ ಚಟುವಟಿಕೆ ಅತಿ ಅವಶ್ಯಕ. ಬೆಳಗ್ಗಿನ ವೇಗದ ನಡಿಗೆ ಎಲ್ಲ ರೋಗಗಳನ್ನು ಹೊಡೆದೋಡಿಸುತ್ತದೆ.
3. 10 ನಿಮಿಷ ಧ್ಯಾನ ಮಾಡಿ
ಧ್ಯಾನವು ನಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ಮಾನಸಿಕ ಆತಂಕ, ಖಿನ್ನತೆ, ಕೋಪ ಮತ್ತು ಗೊಂದಲವನ್ನು ಹೊಡೆದಟ್ಟಿ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.
4. ನೀರನ್ನು ಕುಡಿಯಿರಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ದೇಹದ ಒಳಗೆ ಸಂಗ್ರಹವಾಗಿರುವ ಟಾಕ್ಸಿನ್ಸ್ ಹೊರಹಾಕಲ್ಪಡುತ್ತದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಕುಡಿಯಿರಿ.
5. ನಿಮ್ಮ ಗುರಿಗಳ ಬಗ್ಗೆ ವಿಮರ್ಶೆ
ನಿಮ್ಮ ಈ ದಿನದ ಗುರಿಗಳೇನು? ಅವುಗಳನ್ನು ತಲುಪಲು ಏನೇನು ಸಿದ್ಧತೆಗಳು ಬೇಕು? ಎಂದು ಸ್ವಲ್ಪ ವಿಮರ್ಶೆ ಮಾಡಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ಇದರಿಂದ ನೀವು ಸುಲಭವಾಗಿ ನಿಮ್ಮ ಗುರಿಯನ್ನು ತಲುಪಲು ಸಾಧ್ಯ.
6. ನಗು
ನೀವು ನಗುವಿನ ಪ್ರಾಮುಖ್ಯತೆ ಬಗ್ಗೆ ಕೇಳಿರಬಹುದು ಅಲ್ವಾ. ನಗುವಿನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ನಗು ನಮ್ಮನ್ನು ಖುಷಿಯಾಗಿ ಇಡುವುದಲ್ಲದೆ ನಮ್ಮನ್ನು ನೋಡುವವರನ್ನು ನಮ್ಮಡೆಗೆ ಆಕರ್ಷಿಸುತ್ತದೆ. ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.
7. ಒಳ್ಳೆಯ ಆಹಾರವನ್ನು ಸೇವಿಸಿ
ನಮ್ಮ ಬಾಯಿಗೆ ಹೆಚ್ಚು ರುಚಿಯಾಗಿರುವುದು ದೇಹಕ್ಕೆ ಹೆಚ್ಚು ಕಹಿ. ಆದರಿಂದ ನೀವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಅದರ ಪೌಷ್ಠಿಕಾಂಶಗಳ ಬಗ್ಗೆ ಮತ್ತು ಅದರಿಂದ ನಿಮಗೆ ಉಪಯುಕ್ತವಾಗುವ ಅಂಶಗಳ ಬಗ್ಗೆ ಮೊದಲು ಗಮನಹರಿಸಿ. ನಿಮಗೆ ಆರೋಗ್ಯವಾದ ಮತ್ತು ಸದೃಢವಾದ ದೇಹ ಇದ್ದಲ್ಲಿ, ನೀವು ಸೇವಿಸುವ ಪ್ರತಿಯೊಂದು ತುತ್ತಿನ ಆಹಾರವೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳು, ಹಸಿರು ಸೊಪ್ಪುಗಳು ಹೇರಳವಾಗಿರಲಿ.

No comments:
Post a Comment