ವರ್ಷಪೂರ್ತಿ ನಮಗೆ ಸಿಗುವ ಹಣ್ಣು ಪಪ್ಪಾಯಿ ಒಂದೇ. ಇದು ತುಂಬಾ ಸಿಹಿಯಾದ ರುಚಿಯನ್ನು ಹೊಂದಿದ್ದು ಅತ್ಯದ್ಭುತ ಔಷದೀಯ ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ಚರ್ಮ, ಕೂದಲುಗಳ ಆರೋಗ್ಯಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಇವೆ. ಈ ಹಣ್ಣಿನ ತಿರುಳನ್ನು ಅನೇಕ ಸೌಂದರ್ಯ ವರ್ಧಕ ಕ್ರೀಮ್ ಗಳಲ್ಲಿ ಹಾಗೂ ಶಾಂಪೂಗಳಲ್ಲಿ ಬಳಸಲಾಗುತ್ತಿದೆ. ಇದು ಸೌಂದರ್ಯ ವರ್ಧಕ ಹಾಗೂ ಆರೋಗ್ಯ ವರ್ಧಕ ಹಣ್ಣು ಕೂಡ ಹೌದು.
ಮೊದಲನೇಯದಾಗಿ ಪಪ್ಪಾಯದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಸಿಯಂ ಸಮೃದ್ಧವಾಗಿದೆ. ಪಾಲಿಕ್ ಆಮ್ಲದ ರೂಪದಲ್ಲಿ ವಿಟಮಿನ್ ಬಿ ಇದರಲ್ಲಿದೆ. ವಿಟಮಿನ್ ಬಿ-6, ವಿಟಮಿನ್ ಬಿ-1 ಮತ್ತು ರಿಬೋಫ್ಲಾವಿನ್ ಇದರಲ್ಲಿದೆ. ಈ ವಿಟಮಿನ್ ಮತ್ತು ಮಿನರಲ್ ಗಳಿಂದ ಪಪ್ಪಾಯ ಒಂದು ಅದ್ಭುತ ಆಹಾರ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ನಿಯಂತ್ರಿಸುತ್ತದೆ.
1. ಈ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ಹೋಗಲಾಡಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
2. ಈ ಹಣ್ಣಿನಲ್ಲಿ ನೀರಿನಂಶ ಅಧಿಕವಾಗಿ ಇರುವುದರಿಂದ ಇದು ಚರ್ಮವನ್ನು ತೇವಭರಿತವಾಗಿರಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.
3. ಇದೊಂದು ಅತ್ಯದ್ಭುತವಾದ ಹಣ್ಣು ಆಗಿದ್ದು ವಿಟಮಿನ್ ಮತ್ತು ಮಿನರಲ್ ಗಳಿಂದ ಸಮೃದ್ದವಾಗಿದೆ. ಈ ಹಣ್ಣು ಉಳಿದ ಹಣ್ಣುಗಳಿಗಿಂತ ಕಡಿಮೆ ದರದಲ್ಲಿ ಸಿಗುವುದರಿಂದ ಸಾಮಾನ್ಯ ಜನರು ಇದನ್ನು ಯಥೇಚ್ಚವಾಗಿ ಬಳಸಬಹುದಾಗಿದೆ.
4. ಪಪ್ಪಾಯಿ ಹಣ್ಣನ್ನು ಚೆನ್ನಾಗಿ ರುಬ್ಬಿ ಅದನ್ನು ಮುಖಕ್ಕೆ ಹಚ್ಚಿ . 25 ನಿಮಿಷದ ನಂತರ ಮುಖವನ್ನು ತೊಳೆಯುವುದರಿಂದ ಮೊಡವೆಗಳು ಮಾಯವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
5. ಈ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನುಣುಪಾದ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುವುದು.
6. ಈ ಹಣ್ಣಿನ ತಿರುಳನ್ನು ಮುಖಕ್ಕೆ ಮಾತ್ರವಲ್ಲದೆ ಕಾಲುಗಳಿಗೂ ಬಳಸಬಹುದಾಗಿದೆ. ಇದರ ತಿರುಳನ್ನು ಕಾಲುಗಳಿಗೆ ಹಚ್ಚುವುದರಿಂದ ಕಾಲುಗಳು ಬೆಳ್ಳಗಾಗುವುದು.
7. ಇದು ಮುಪ್ಪಿನ ಲಕ್ಷಣಗಳನ್ನು ತೊಡೆದು ಹಾಕುತ್ತದೆ.
8. ಪಪ್ಪಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಕೂದಲು ಉದುರುವುದನ್ನು ತಡೆಗಟ್ಟಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
9. ಇದು ತಲೆಹೊಟ್ಟು ಆಗದಂತೆ ತಡೆಗಟ್ಟುತ್ತದೆ.
10. ಇದು ಕಣ್ಣಿನ ದೃಸ್ಟಿಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳು ನಿಮ್ಮಿಂದ ದೂರಾಗುತ್ತವೆ.
11. ಕೊಲೆಸ್ಟ್ರಾಲ್ ಅನ್ನು ಇಳಿಸುತ್ತದೆ.
12. ಅತಿಯಾದ ತೂಕವನ್ನು ಹೊಂದಿರುವವರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯವನ್ನು ಸೇರಿಸುವುದು ಅತ್ಯವಶ್ಯಕ. ಕ್ಯಾಲೋರಿ ಕಡಿಮೆ ಇರುವ ಈ ಹಣ್ಣು ನಿಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ತೂಕ ಇಳಿಕೆಯಾಗುವಂತೆ ಮಾಡುತ್ತದೆ.
13. ನಿಮ್ಮನ್ನು ರೋಗಿಯನ್ನಾಗಿ ಮಾಡುವ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಪಪ್ಪಾಯ ಒದಗಿಸುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
14.
ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು.
ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು.
15. ಮುಟ್ಟಿನ ನೋವು ಅನುಭವಿಸುವ ಹೆಂಗಳೆಯರು ತಿನ್ನಲೇಬೇಕಾದ ಹಣ್ಣಾಗಿದೆ ಪಪ್ಪಾಯ. ಇದರಲ್ಲಿರುವ ಪೆಪೇನ್ ಅಂಶ ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ.
16. ಪಪ್ಪಾಯದಲ್ಲಿರುವ ಉತ್ಕರ್ಷಣ ನಿರೋಧಿ ಅಂಶ, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಪಪ್ಪಾಯವು ಕರುಳಿನ ಮತ್ತು ಜನನೇಂದ್ರಿಯಾದ ಕ್ಯಾನ್ಸರ್ ಅನ್ನು ತಡೆಗಟ್ಟಿರುವ ನಿದರ್ಶನಗಳು ನಮ್ಮ ಕಣ್ಣಮುಂದಿದೆ.
17. ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
(ಸಂಗ್ರಹ)

















No comments:
Post a Comment