Wednesday, 22 January 2020

ನಾವು ಯಾಕೆ ಪ್ರತಿದಿನ ಹಾಲನ್ನು ಕುಡಿಯಬೇಕು ಗೊತ್ತಾ?

ಹಾಲು ಒಂದು ಪೌಷ್ಟಿಕವಾದ ಆಹಾರ. ಎಲ್ಲರೂ ಕುಡಿಯಬಹುದಾದ ಆರೋಗ್ಯಕರ ಪೇಯವಾಗಿದೆ. ಆಗ ತಾನೇ ಭೂಮಿಗೆ ಬಂದ ಮಗುವಿಗೂ ಕೂಡ ಮೊದಲ ಆಹಾರವೇ ಹಾಲು. ಬೆಳೆಯುವ ಮಕ್ಕಳಿಗೂ ಕೂಡ ಹಾಲು ತುಂಬಾನೇ ಮುಖ್ಯ. ಹಾಲಿನಲ್ಲಿ ವಿಟಮಿನ್, ಕ್ಯಾಲ್ಶಿಯಮ್,  ಫಾಸ್ಫರಸ್,  ಕಾರ್ಬೋಹೈಡ್ರೇಟ್, ಮ್ಯಾಗ್ನೀಸಿಯಮ್,   ಪ್ರೋಟೀನ್ ಅಂಶಗಳು ಹೇರಳವಾಗಿದ್ದು ಸಂಪೂರ್ಣ ಆಹಾರವಾಗಿದೆ. 


ಇದನ್ನು ಪ್ರತಿದಿನವೂ ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಗಳಿವೆ.


1. ಪ್ರತಿದಿನವೂ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವ ಕ್ಯಾಲ್ಶಿಯಮ್ ದೊರೆತು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.








2. ಇದು ಮೈಗ್ರೇನ್ ತಲೆನೋವಿನಿಂದ ಉಪಶಮನ ನೀಡುತ್ತದೆ.






3. ಹಾಲಿನಲ್ಲಿರುವ ಕ್ಯಾಲ್ಶಿಯಮ್ ಹಾಗೂ ವಿಟಮಿನ್ ಗಳು ಉಗುರು ಮತ್ತು ಕೂದಲುಗಳ ಆರೋಗ್ಯವನ್ನು ಕಾಪಾಡುತ್ತದೆ.






5. ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿಯಬೇಕು. ಇದರಿಂದ ನಮ್ಮ ದೇಹಕ್ಕೆ ಹಿತವಾದ ಅನುಭವಾಗಿ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ.







6. ಪ್ರತಿದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ಎದೆ ಉರಿ ಹಾಗೂ ಗಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ.







7. ಹಾಲನ್ನು ಪ್ರತಿದಿನ ಕುಡಿಯುವುದರಿಂದ ಕ್ಯಾಲ್ಶಿಯಮ್ ಸರಿಯಾದ ಪ್ರಮಾಣದಲ್ಲಿ ದೊರೆತು ಹಲ್ಲುಗಳ ಆರೋಗ್ಯ ಸುಧಾರಿಸುತ್ತದೆ.







8. ಹೃದಯದ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.







9. ಈಗಿನ ಒತ್ತಡದ ಜೀವನದಲ್ಲಿ, ದಿನವಿಡೀ ಆಫೀಸ್ ಕೆಲಸ ಮಾಡಿ ದಣಿದಿರುತ್ತೀರಿ. ಇದಕ್ಕೇನು ಪರಿಹಾರ ಗೊತ್ತಾ? ಒಂದು ಲೋಟ ಬಿಸಿ ಹಾಲನ್ನು ಕುಡಿಯಿರಿ. ಇದರಿಂದ ನಿಮ್ಮ ಮನಸ್ಸಿಗೆ ಹಿತವಾದ ಅನುಭವವಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ.






10. ಹಾಲು ಒಳ್ಳೆಯ ಕ್ಲೆನ್ಸರ್ ತರ ಕೆಲಸ ಮಾಡುತ್ತದೆ. ಒಂದು ಹತ್ತಿಯ ತುಂಡಿನಿಂದ ಹಸಿ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷ ಬಿಟ್ಟು ತೊಳೆಯಿರಿ. ಇದೇ ರೀತಿ ಪ್ರತಿದಿನವೂ ಮಾಡುವುದರಿಂದ ಮುಖವು ಬೆಳ್ಳಗೆ ಆರೋಗ್ಯಯುತವಾಗಿ ಹೊಳೆಯುತ್ತದೆ.





(ಸಂಗ್ರಹ)

No comments:

Post a Comment