Wednesday, 22 January 2020

ಪ್ರತಿದಿನ 3 ಬಾಳೆಹಣ್ಣುಗಳ ಸೇವನೆಯಿಂದ ಆಗುವ ಅತ್ಯದ್ಭುತ ಲಾಭಗಳು

ಬಾಳೆ ಹಣ್ಣು ಚಿಕ್ಕ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಇಷ್ಟ ಪಡುವ ಹಣ್ಣು. ಬಹುತೇಕ ಪೂಜೆ ಸಮಾರಂಭಗಳಲ್ಲಿ ಬಾಳೆಹಣ್ಣಿಗೆ ಹೆಚ್ಚಿನ ಪ್ರಾಶಸ್ತ್ಯ. ಮಾರುಕಟ್ಟೆಯಲ್ಲಿ ಇತರ ಹಣ್ಣಿಗಿಂತ ಸ್ವಲ್ಪ ಅಗ್ಗವಾಗಿ ಜನ ಸಾಮಾನ್ಯರು ಸುಲಭವಾಗಿ ಬಳಸಬಹುದಾದ ಹಣ್ಣಾಗಿದೆ. ಬೇರೆ ಹಣ್ಣುಗಳಂತೆ ಬಾಳೆ ಹಣ್ಣನ್ನು ಪ್ರತಿದಿನ ಬಳಸುವುದರಿಂದ ಅನೇಕ ಲಾಭವನ್ನು ಪಡೆಯಬಹುದು. ಸಂಶೋಧನೆಗಳ ಪ್ರಕಾರ ಬಾಳೆಹಣ್ಣನ್ನು ನಿಮ್ಮ ದಿನ ನಿತ್ಯದ ಆಹಾರದ ಜೊತೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ವೈಜ್ಞಾನಿಕ ಸಂಶೋಧನೆಗಳು ಹೇಳುವಂತೆ ದಿನಕ್ಕೆ 3 ಬಾಳೆಹಣ್ಣು ನಮ್ಮ ದೇಹಕ್ಕೆ ಬೇಕಾಗುವಷ್ಟು ಶಕ್ತಿಯನ್ನು ನೀಡುತ್ತದೆ ಅಂದರೆ ನೀವು ನಂಬುತ್ತೀರಾ?






ನೀವು ಬಾಳೆಹಣ್ಣು ಪ್ರಿಯರಾ? ಹೌದು ಆಗಿದ್ದಲ್ಲಿ ನಿಮಗಿದೋ ಸಿಹಿ ಸುದ್ಧಿ. ಬೇರೆ ಹಣ್ಣುಗಳಂತೆ ಬಾಳೆಹಣ್ಣನ್ನು ಕೂಡ ನಿಮ್ಮ ಡಯೆಟ್ನಲ್ಲಿ ಸೇರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬಾಳೆಹಣ್ಣಿನಲ್ಲಿ ಎಂತಹ ಅತ್ಯದ್ಭುತ ಗುಣಗಳು ಇವೆ ಎಂದು ನಿಮಗೆ ಗೊತ್ತೇ? 


1. ಖಿನ್ನತೆಯನ್ನು ಹೋಗಲಾಡಿಸುತ್ತದೆ









ಆಧುನಿಕ ಸಂಶೋಧನೆಗಳ ಪ್ರಕಾರ ಖಿನ್ನತೆಯಿಂದ ಬಳಲುತ್ತಿದ್ದವರಿಗೆ ಬಾಳೆಹಣ್ಣನ್ನು ಸೇವಿಸಲು ಹೇಳಿ ಬಳಿಕ ಅವರಲ್ಲಿ ಆದ ಬದಲಾವಣೆಯನ್ನು ಗಮನಿಸಿದಾಗ ಅವರ ಖಿನ್ನತೆಯ ಸಮಸ್ಯೆಯು ದೂರವಾಗಿ ಸಂತೋಷವಾಗಿರುವುದು ಬೆಳಕಿಗೆ ಬಂತು. ಆದರಿಂದ ಬಾಳೆಹಣ್ಣು ನಿಮ್ಮ ಖಿನ್ನತೆಯನ್ನೂ ದೂರವಾಗಿಸಿ ನಿಮ್ಮನ್ನು ಸಂತೋಷವಾಗಿರಿಸುತ್ತದೆ.




2. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ







ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಮತ್ತು ಉಪ್ಪಿನ ಅಂಶ ಕಡಿಮೆ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ


3. ಜೀರ್ಣಕ್ರಿಯೆ ಸುಧಾರಿಸುತ್ತದೆ









ಬಾಳೆಹಣ್ಣಿನಲ್ಲಿ ನಾರಿನ ಅಂಶ ಹೇರಳವಾಗಿ ಇರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.


4. ನಿಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ








ಪ್ರತಿದಿನ 3 ಬಾಳೆಹಣ್ಣು ಸೇವಿಸುವುದರಿಂದ 90 ನಿಮಿಷದ ವ್ಯಾಯಾಮಕ್ಕೆ ಬೇಕಾಗುವಸ್ತು ಶಕ್ತಿಯನ್ನು ಒದಗಿಸುತ್ತದೆ.


5. ಅನಿಮಿಯಾ ಬರದಂತೆ ಕಾಪಾಡುತ್ತದೆ







ಇದರಲ್ಲಿ ಕಬ್ಬಿಣದಂಶವು ಸಮೃದ್ಧವಾಗಿದ್ದು ರಕ್ತದಲ್ಲಿನ ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸಿ ಅನಿಮಿಯದಿಂದ ನಿಮ್ಮನ್ನು ರಕ್ಷಿಸುತ್ತದೆ.


6. ಮಲಬದ್ಧತೆಯನ್ನು ನಿವಾರಿಸುತ್ತದೆ








ಈ ಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು ಇದರ ಸೇವನೆಯಿಂದ ಸರಾಗವಾಗಿ ಮಲವಿಸರ್ಜನೆ ಆಗುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ.



7. ಹೃದಯದ ಆರೋಗ್ಯಕ್ಕೆ ಒಳ್ಳೆಯದು








ನಾರು ಪದಾರ್ಥಗಳ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬಾಳೆಹಣ್ಣಿನಲ್ಲಿ ಅತ್ಯಧಿಕ ನಾರು ಅಂಶಗಳಿರುವುದರಿಂದ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.




8. ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ










ಇದರಲ್ಲಿ ವಿಟಮಿನ್ ಸೀ ಅಂಶ ಹೇರಳವಾಗಿದ್ದು ಪ್ರತಿದಿನ ಬಳಸುವುದರಿಂದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.




9. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ










ಜ್ವರ ಬಂದು ದೇಹದ ಉಷ್ಣತೆ ಜಾಸ್ತಿಯಾಗಿದ್ದರೆ ಅಥವಾ ಬೇಸಿಗೆ ದಿನಗಳಲ್ಲಿ ನಿಮಗೆ ಮೈ ಬಿಸಿಯಾಗಿರುವಂತೆ ಭಾಸವಾದರೆ ಬಾಳೆಹಣ್ಣು ತಿನ್ನುವುದರಿಂದ ಕಡಿಮೆಯಾಗುತ್ತದೆ.



10. ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ








ಬಾಳೆಹಣ್ಣಿನಲ್ಲಿರುವ ಅಮೈನೋ ಆಮ್ಲಗಳು ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹಕಾರಿ. 




11. ಮೂಳೆಗಳು ಸುದೃಢವಾಗುತ್ತವೆ








ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಮೂಳೆಗಳ ಸವೆತವನ್ನು ತಡೆಗಟ್ಟಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. 


(ಸಂಗ್ರಹ)

No comments:

Post a Comment