ದಕ್ಷಿಣ ಭಾರತದಲ್ಲಿ ಜನರು ಹೆಚ್ಚಾಗಿ ಅನ್ನವನ್ನು ತಮ್ಮ ಪ್ರಮುಖ ದೈನಂದಿನ ಆಹಾರವಾಗಿ ಸೇವಿಸುತ್ತಾರೆ. ಹಾಗೆ ನೋಡಿದರೆ ಉತ್ತರ ಭಾರತದ ಕೆಲವೆಡೆ ಚಪಾತಿಯೇ ಅವರ ಪ್ರಮುಖ ದೈನಂದಿನ ಆಹಾರವಾಗಿದೆ. ಇನ್ನೂ ಡಯೆಟ್ ಮಾಡುವವರಂತೂ ಒಪ್ಪೊತ್ತಿಗೆ ಚಪಾತಿಯನ್ನು ಖಂಡಿತ ಸೇವಿಸುತ್ತಾರೆ ಹೆಚ್ಚಿನ ಸಿನಿಮಾ ತಾರೆಯರು ಕೂಡ ತಮ್ಮ ತೂಕ ಏರದಂತೆ ನೋಡಿಕೊಳ್ಳುವ ಮತ್ತು ಕ್ಯಾಲೊರಿಗಳು ಕಡಿಮೆ ಇರುವ ಚಪಾತಿಗೆ ಮೊರೆ ಹೋಗಿದ್ದಾರೆ.
ಆದರೆ ನಮ್ಮಲ್ಲಿ ಅನೇಕರಿಗೆ ಚಪಾತಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭ ಇನ್ನೂ ಗೊತ್ತಿಲ್ಲ. ಹಲವು ಸಂಶೋಧನೆಗಳ ಪ್ರಕಾರ ಇದು ಅತ್ಯಂತ ಆರೋಗ್ಯಯುತವಾದ ಆಹಾರ ಎಂದು ಧೃಢೀಕರಿಸಲ್ಪಟ್ಟಿದೆ. ನಮ್ಮ ಹೃದಯದ ಆರೋಗ್ಯದ ದೃಷ್ಟಿಯಿಂದ ಇದೊಂದು ಮಹತ್ವಪೂರ್ಣವಾದ ಆಹಾರವೂ ಹೌದು ಏಕೆಂದರೆ ಇದರಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿ ಇವೆ.
ಚಪಾತಿಯ ಸೇವನೆಯಿಂದ ಏನೆಲ್ಲ ಲಾಭಗಳು ಎಂದು ಒಂದೊಂದಾಗಿ ನೋಡೋಣವೇ?
1. ದೈನಂದಿನ ಚಟುವಟಿಕೆಗೆ ಬೇಕಾಗುವಷ್ಟು ಶಕ್ತಿಯನ್ನು ಒದಗಿಸುತ್ತದೆ.
ಚಪಾತಿಯೂ ನಮ್ಮ ದೇಹಕ್ಕೆ ಬೇಕಾಗುವಷ್ಟು ವಿಟಮಿನ್ ಮತ್ತು ಮಿನರಲ್ ಗಳಾದ ಮ್ಯಾಗ್ನೀಸಿಯಮ್, ಫಾಸ್ಫರಸ್, ಪೊಟಾಷಿಯಂ, ಕ್ಯಾಲ್ಶಿಯಮ್ ಮತ್ತು ಐರನ್ ಗಳನ್ನು ಪೂರೈಸುತ್ತದೆ.
2. ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ.
ಇದು ಸುಲಭವಾಗಿ ಜೀರ್ಣವಾಗುವುದರಿಂದ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ.
3. ಚರ್ಮದ ಆರೋಗ್ಯಕ್ಕೂ ಒಳ್ಳೆಯದು
ಇದರಲ್ಲಿರುವ Zinc ಮೊದಲಾದ ಮಿನರಲ್ ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ.
4. ಪ್ರತಿದಿನ ಚಪಾತಿ ಸೇವಿಸುವವರಿಗೆ ಅನಿಮಿಯಾ ಬರುವ ಸಾಧ್ಯತೆ ಕಡಿಮೆ
ನಿಮ್ಮ ರಕ್ತದಲ್ಲಿರುವ ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಇದನ್ನು ನಿಮ್ಮ ದೈನಂದಿನ ಡಯೆಟ್ ನಲ್ಲಿ ಬಳ್ಸೋದು ಹೆಚ್ಚು ಸೂಕ್ತ ಏಕೆಂದರೆ ಇದರಲ್ಲಿ ಕಬ್ಬಿಣ ಅಂಶವು ಹೇರಳವಾಗಿದೆ. ಇದರಿಂದ ಅನಿಮಿಯಾ ಬರದಂತೆ ನೋಡಿಕೊಳ್ಳಬಹುದು.
5. ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿ
ಎಣ್ಣೆಯನ್ನು ಬಳಸದೆ ಮಾಡುವ ಚಪಾತಿಯನ್ನು ಸೇವಿಸುವುದರಿಂದ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬು ಕರಗಿ ಆರೋಗ್ಯಕರ ತೂಕವನ್ನು ಪಡೆಯಬಹುದು.
6. ಮಲಬದ್ಧತೆಯಿಂದ ಪಾರಾಗಬಹುದು
ಇದರಲ್ಲಿ ದೇಹಕ್ಕೆ ಅಗತ್ಯವಾಗಿರುವ ನಾರಿನ ಅಂಶವು ಹೇರಳವಾಗಿದ್ದು ಇದನ್ನು ಪ್ರತಿದಿನ ಬಳಸಿ ಮಲಬದ್ಧತೆಯಿಂದ ಮುಕ್ತಿ ಹೊಂದಬಹುದು.
7. ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ
ಚಪಾತಿಯಲ್ಲಿ ಇರುವ ನಾರಿನಂಶಗಳು ಮತ್ತು ಸೆಲೆನಿಯಂ ಅಂಶವು ಕೆಲವು ತರಹದ ಕ್ಯಾನ್ಸರ್ ಗಳು ಬರದಾನೆ ನೋಡಿಕೊಳ್ಳುತ್ತವೆ.
(ಸಂಗ್ರಹ)
(ಸಂಗ್ರಹ)








No comments:
Post a Comment